Advertisement

ಡಿ.15ಕ್ಕೆ ಅಗ್ನಿ-5 ಪರೀಕ್ಷೆ? ಬಂಗಾಲ ಕೊಲ್ಲಿಯಲ್ಲಿ ವಿಮಾನ ಹಾರಾಟಕ್ಕೆ ನಿಷೇಧ

01:07 AM Dec 12, 2022 | Team Udayavani |

ಹೊಸದಿಲ್ಲಿ: ಒಡಿಶಾ ಕರಾವಳಿಯ ಅಬ್ದುಲ್‌ ಕಲಾಂ ದ್ವೀಪದಲ್ಲಿ ಡಿ.15 ಅಥವಾ 16ರಂದು ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿದೆ ಎಂದು ಹೇಳಲಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಬಂಗಾಲ ಕೊಲ್ಲಿಯಲ್ಲಿ ವಿಮಾನಗಳು ಹಾರಾಡದಂತೆ ನೋಟಿಸ್‌ ಟು ಏರ್‌ಮನ್‌/ನೋಟಿಸ್‌ ಟು ಏರ್‌ ಮಿಷನ್ಸ್‌ ನೀಡಲಾಗಿದೆ.

ನಾರ್ವೆಯ ಮಾರಿಟೈಮ್‌ ಆಪ್ಟಿಮಾ ಕಂಪೆನಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನದ ಗೂಢಚರ್ಯೆ ಹಡಗು “ಯುವಾನ್‌ ವಾಂಗ್‌ 5′ ಪ್ರವೇಶ ಮಾಡಿದೆ ಎಂಬ ಮಾಹಿತಿಯ ನಡುವೆಯೇ ಈ ಪರೀಕ್ಷೆ ನಡೆಯಲಿದೆ. ಅಗ್ನಿ-5 ಉಡಾವಣೆಯ ಮಾಹಿತಿ ತಿಳಿದೇ ವಿವಿಧ ಟ್ರ್ಯಾಕಿಂಗ್‌ ಮತ್ತು ಕಣ್ಗಾ­ವಲು ಸಾಧನಗಳನ್ನು ಅಳವಡಿಸಿರುವ ಚೀನದ ಪತ್ತೆದಾರಿ ಹಡಗು ಹಿಂದೂ ಮಹಾಸಾಗರ ಪ್ರವೇಶಿಸಿದೆ ಎಂದು ಹೇಳಲಾಗಿದೆ.

ವಿಶೇಷತೆಗಳೇನು?
ಅಗ್ನಿ-5 ಮೇಲ್ಮೈ ಯಿಂದ ಮೇಲ್ಮೆ„ಗೆ ಚಲಿಸುವ ಬ್ಯಾಲಿಸ್ಟಿಕ್‌ ಕ್ಷಿಪಣಿ. 5,000 ಕಿ.ಮೀ. ವರೆಗಿನ ಗುರಿಯನ್ನು ನಿಖರವಾಗಿ ಕ್ರಮಿಸುವ ಸಾಮರ್ಥ್ಯ
ಚೀನದ ಯಾವುದೇ ಪ್ರದೇಶಕ್ಕೆ ಸುಲಭವಾಗಿ ಕ್ರಮಿಸಬಹುದಾಗಿದೆ.
1,500 ಕೆ.ಜಿ.- ಇಷ್ಟು ತೂಕದ ಸಿಡಿತಲೆ ಹೊತ್ತೂಯ್ಯುವ ಸಾಮರ್ಥ್ಯ
50,000 ಕೆ.ಜಿ. ತೂಕ ಒಯ್ಯುವ ಸಾಮರ್ಥ್ಯ
1989 ಅಗ್ನಿ ಕ್ಷಿಪಣಿ ಸರಣಿ ಪರೀಕ್ಷೆ ಆರಂಭ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next