Advertisement

ತಂತ್ರಜ್ಞಾನ ಬಳಸಿ ಏಜೆಂಟರ ಹಾವಳಿಗೆ ತಡೆ ಸಾಧ್ಯ: ವಿಜಯ ಭಾಸ್ಕರ

04:23 PM Feb 28, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಸರಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿಯನ್ನು ತಂತ್ರಜ್ಞಾನದ ಮೂಲಕ ತಪ್ಪಿಸಲು ಸಾಧ್ಯವಿದೆ ಎಂದು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷ ಟಿ.ಎಮ್‌. ವಿಜಯ ಭಾಸ್ಕರ ಹೇಳಿದರು.

Advertisement

ಧಾರವಾಡ ಶಾಖೆಯ ಭಾರತೀಯ ಸಾರ್ವಜನಿಕ ಆಡಳಿತ ವಿಭಾಗ, ಕವಿವಿ ರಾಜ್ಯಶಾಸ್ತ್ರ ವಿಭಾಗ ಮತ್ತು ಕವಿವಿ ಸಾರ್ವಜನಿಕ ಆಡಳಿತ ವಿಭಾಗಗಳ ಸಹಯೋಗದಲ್ಲಿ ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ “ಆಡಳಿತದಲ್ಲಿ ಜನರ ಭಾಗವಹಿಸುವಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಸುಧಾರಣೆಗಳು’ ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಆಡಳಿತದಲ್ಲಿ ತಂತ್ರಜ್ಞಾನವನ್ನು ಅನೇಕ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಸಕಾಲ ಮತ್ತು ಸೇವಾಸಿಂಧು ತಂತ್ರಾಂಶಗಳ ಮುಖಾಂತರ ಸುಲಭವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಸೇವೆಗಳನ್ನು ನೀಡಲಾಗುತ್ತದೆ. ಆಡಳಿತ ವಿಕೇಂದ್ರೀಕರಣದಿಂದ ಸರಳ ಆಡಳಿತ ಮಾಡಲು ಸಾಧ್ಯ. ಜನರು ಪದೇ ಪದೇ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ ಎಂದರು.

ಸರಕಾರ ನೀಡುವ ಸೇವೆಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲುಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಮುಖ್ಯ. ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ್ನೇಹಿ ಆಗಿರಬೇಕು. ಆಡಳಿತದಲ್ಲಿ ಜನಸ್ನೇಹಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು. ನಾನು ಆಡಳಿತಾತ್ಮಕ ಸುಧಾರಣೆಯ ಆಯೋಗದ ಅಧ್ಯಕ್ಷನಾಗಿದ್ದಾಗ ಸರಕಾರಕ್ಕೆ ಆರು ವರದಿಗಳ ಮೂಲಕ ಆರು ಸಾವಿರಕ್ಕಿಂತಲೂ ಹೆಚ್ಚು ಶಿಫಾರಸುಗಳನ್ನು ಆಡಳಿತಾತ್ಮಕ ಸುಧಾರಣೆಗೆ ಮಾಡಲಾಗಿತ್ತು ಎಂದು ತಿಳಿಸಿದರು.

ಪ್ರೊ| ಎಸ್‌.ಎಸ್‌.ಪಟಗುಂಡಿ ಮಾತನಾಡಿ, ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಆಡಳಿತಾತ್ಮಕ ಸುಧಾರಣೆ ಬಹಳ ಮುಖ್ಯವಾಗಿದೆ. ಉತ್ತಮ ಆಡಳಿತಕ್ಕೆ ತಂತ್ರಜ್ಞಾನದ ಸಹಕಾರ ಬಹಳ ಮುಖ್ಯವಾಗಿದೆ ಎಂದರು. ವಿಶ್ರಾಂತ ಕುಲಪತಿ ಪ್ರೊ| ಎಂ.ಎಸ್‌. ಸುಭಾಷ್‌ ಮಾತನಾಡಿದರು. ತಾಂತ್ರಿಕ ಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆಯ ಜಿ.ಸಿ.ತಲ್ಲೂರ, ಧಾರವಾಡ ಐಐಟಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ರಾಜೇಶ ಹೆಗಡೆ, ಹಾವೇರಿ ವಿವಿ ಕುಲಸಚಿವ ಡಾ| ಎಸ್‌.ಟಿ. ಬಾಗಲಕೋಟಿ, ಬೆಳಗಾವಿಯ ಉದ್ಯಮಿ ಡಾ| ನಿತಿನ್‌ ಖೋತ್‌, ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ| ಚಿನ್ಮಯಾನಂದ, ಕವಿವಿ ಭೌತಶಾಸ್ತ್ರ ವಿಭಾಗದ ಡಾ| ಜಗದೀಶ್‌ ಟೋನಣ್ಣವರ ಅಭಿಪ್ರಾಯ ಮಂಡಿಸಿದರು.

Advertisement

ಕವಿವಿ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಬಿ.ಎಂ. ರತ್ನಾಕರ್‌, ಡಾ|ವಿಜಯಕುಮಾರ್‌ ಬೇಟಗಾರ, ಪ್ರೊ| ಎಮ್‌.ಜಿ.ಖಾನ್‌, ಡಾ| ಎಂ.ಬಿ. ದಳಪತಿ. ಡಾ| ಎನ್‌.ಆರ್‌. ಬಾಳಿಕಾಯಿ, ಡಾ| ಲಕ್ಷ್ಮಣ, ಡಾ| ಪೊಲಿಸ್‌ ಪಾಟೀಲ, ಡಾ|ಜಗದೀಶಗೌಡ, ಡಾ| ಆರ್‌.ಎನ್‌. ಮರೇಪ್ಪಗೌಡರ, ಡಾ| ಬಸಪ್ಪ ಅಥಣಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next