Advertisement

ವೀಸಾ ನೀಡದೆ ಸಂಸ್ಥೆ ವಂಚನೆ: ದೂರು

12:42 PM Jan 31, 2018 | Team Udayavani |

ಉಡುಪಿ: ಹಣ, ಪಾಸ್‌ಪೋರ್ಟ್‌ ಪಡೆದು ವೀಸಾ ನೀಡದೆ ಉಡುಪಿಯ ಸಂಸ್ಥೆಯೊಂದು ವಂಚಿಸಿದೆ ಎಂದು ಶಿರ್ವದ ನೀಮಾ ರಾವ್‌ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ವಿದೇಶಿ ಉದ್ಯೋಗ ಆಕಾಂಕ್ಷಿ ಯಾಗಿದ್ದು, ಉಡುಪಿ ರಾಜ್‌ ಟವರ್‌ನಲ್ಲಿರುವ ಆಪ್ಟಿಮಾ ಉಡುಪಿ ಸಂಸ್ಥೆಗೆ ಡಿಪಿ10 ವೀಸಾ ಪಡೆಯಲು 2 ಲ.ರೂ. ಹಾಗೂ ಸಂಸ್ಥೆಯವರು ಕೇಳಿ ಕೊಂಡಂತೆ ಮೂಲ ಪಾಸ್‌ಪೋರ್ಟ್‌ ಕೂಡ ನೀಡಿದ್ದೆ. ದಿನಗಳು ಕಳೆದರೂ ವೀಸಾ ಬಾರದ ಬಗ್ಗೆ ಆಪ್ಟಿಮಾ ಸಂಸ್ಥೆಯವರಲ್ಲಿ ವಿಚಾರಿಸಲಾಗಿತ್ತು. ಆದರೆ ಅವರಿಂದ ಸಮರ್ಪಕ ಉತ್ತರ ಬಂದಿರಲಿಲ್ಲ. ಅನಂತರ ಇಂಡಿಯನ್‌ ಎಂಬೆಸಿಯಲ್ಲಿ ವಿಚಾರಿಸಿದಾಗ, ತನ್ನ ಹೆಸರಿನಲ್ಲಿ ವೀಸಾ ಕೋರಿ ಯಾವುದೇ ಅರ್ಜಿ ಬಂದಿರುವುದಿಲ್ಲ, ಆ ಸಂಸ್ಥೆ ನೊಂದಣಿಯೇ ಆಗಿಲ್ಲ ಎಂದು ಗೊತ್ತಾಗಿತ್ತು.

ವಿದೇಶಿ ಉದ್ಯೋಗ ಸಿಗುವುದಿಲ್ಲ ಎಂದು ತಿಳಿದು ವೀಸಾ ಕಾರ್ಯ ರದ್ದು ಮಾಡಲಾಗಿತ್ತು. ಬಳಿಕ ವೀಸಾ ಕೊಡಿಸಲು ಪಡೆದಿರುವ ಹಣ ಹಾಗೂ ಮೂಲ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸುವಂತೆ ಆಪ್ಟಿಮಾ ಸಂಸ್ಥೆಯವರಲ್ಲಿ ಕೇಳಿಕೊಂಡರೂ ಹಿಂತಿರುಗಿಸಿರಲಿಲ್ಲ. ಆ ಸಂಸ್ಥೆಯು ಯಾವುದೇ ಮಾನ್ಯತೆ ಅಥವಾ ಸರಕಾರಿ ಪರವಾನಿಗೆ ಹೊಂದದೇ ವೀಸಾ ಕೊಡಿಸುವುದಾಗಿ ಹೇಳಿ ವಂಚಿಸಿದೆ ಎಂದು ನೀಮಾ ರಾವ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next