Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 : ಕಿರೀಟ ಉಳಿಸಿಕೊಂಡ ಕರ್ನಾಟಕ

10:05 AM Dec 02, 2019 | sudhir |

ಸೂರತ್‌: ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ರೋಚಕ ಗೆಲುವಿನೊಂದಿಗೆ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೂರತ್‌ನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಮನೀಷ್‌ ಪಾಂಡೆ ಪಡೆ ಮುನ್ನುಗ್ಗಿ ಬಂದ ತಮಿಳುನಾಡು ತಂಡವನ್ನು ಏಕೈಕ ರನ್ನಿನಿಂದ ಮಣಿಸಿತು.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 5 ವಿಕೆಟಿಗೆ 180 ರನ್‌ ಪೇರಿಸಿದರೆ, ತಮಿಳುನಾಡು 6 ವಿಕೆಟಿಗೆ 179 ರನ್‌ ಮಾಡಿ ಶರಣಾಯಿತು.
ಮೊದಲ 10 ಓವರ್‌ಗಳಲ್ಲಿ 4 ವಿಕೆಟಿಗೆ 80 ರನ್‌ ಮಾಡಿದಾಗ ತಮಿಳುನಾಡು ಒತ್ತಡಕ್ಕೆ ಸಿಲುಕಿತು. ಆದರೆ ಬಾಬಾ ಅಪರಾಜಿತ್‌-ವಿಜಯ್‌ ಶಂಕರ್‌ ಸೇರಿಕೊಂಡು ಬಿರುಸಿನ ಆಟಕ್ಕಿಳಿದರು. 7.1 ಓವರ್‌ಗಳಿಂದ 71 ರನ್‌ ಕಲೆಹಾಕಿದರು. ಅಪರಾಜಿತ್‌ ನಿರ್ಗಮನದ ಬಳಿಕ ಶಂಕರ್‌-ಅಶ್ವಿ‌ನ್‌ ಸೇರಿಕೊಂಡು ತಂಡಕ್ಕೆ ಆಸರೆಯಾದರೆ. ಆದರೆ ಅಂತಿಮ ಓವರಿನಲ್ಲಿ 13 ರನ್‌ ತೆಗೆಯುವ ಸವಾಲನ್ನು ಮೆಟ್ಟಿ ನಿಲ್ಲಲಾಗಲಿಲ್ಲ.

ಕರ್ನಾಟಕ ಸವಾಲಿನ ಮೊತ್ತ
ಕರ್ನಾಟಕಕ್ಕೆ ಕೆ.ಎಲ್‌. ರಾಹುಲ್‌ ಮತ್ತು ದೇವದತ್‌ ಪಡಿಕ್ಕಲ್‌ ಅವರಿಂದ ಬಿರುಸಿನ ಆರಂಭವೇ ಸಿಕ್ಕಿತು. ಇಬ್ಬರೂ ಮುನ್ನುಗ್ಗಿ ಬಾರಿಸತೊಡಗಿದರು. ಆದರೆ ಇದನ್ನು ವಿಸ್ತರಿಸಲು ವಿಫ‌ಲರಾದರು. 5ನೇ ಓವರಿನಲ್ಲಿ ಈ ಜೋಡಿ ಬೇರ್ಪಟ್ಟಿತು. 22 ರನ್‌ ಮಾಡಿದ ರಾಹುಲ್‌ (15 ಎಸೆತ, 2 ಬೌಂಡರಿ, 1 ಸಿಕ್ಸರ್‌) ಅವರನ್ನು ಅಶ್ವಿ‌ನ್‌ ಔಟ್‌ ಮಾಡಿದರು. ಮುಂದಿನ ಎಸೆತದಲ್ಲೇ ಮಾಯಾಂಕ್‌ ಅಗರ್ವಾಲ್‌ಗೆ ಬಲೆ ಬೀಸಿದರು. 39 ರನ್ನಿಗೆ 2 ವಿಕೆಟ್‌ ಬಿತ್ತು.

ಇನ್ನೊಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಪಡಿಕ್ಕಲ್‌ 23 ಎಸೆತಗಳಿಂದ 32 ರನ್‌ (3 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಸುಂದರ್‌ಗೆ ಬೌಲ್ಡ್‌ ಆದರು. ಈ ಹಂತದಲ್ಲಿ ನಾಯಕ ಮನೀಷ್‌ ಪಾಂಡೆ ಮತ್ತು ರೋಹನ್‌ ಕದಮ್‌ ಆರ್ಭಟ ಮೊದಲ್ಗೊಂಡಿತು. 4ನೇ ವಿಕೆಟಿಗೆ 5.4 ಓವರ್‌ಗಳಿಂದ 65 ರನ್‌ ಹರಿದು ಬಂತು. 45 ಎಸೆತಗಳಿಂದ ಅಜೇಯ 60 ರನ್‌ ಬಾರಿಸಿದ ಪಾಂಡೆ ಕರ್ನಾಟಕ ಸರದಿಯ ಟಾಪ್‌ ಸ್ಕೋರರ್‌ (4 ಬೌಂಡರಿ, 2 ಸಿಕ್ಸರ್‌). ಕದಮ್‌ ಕೊಡುಗೆ 28 ಎಸೆತಗಳಿಂದ 35 ರನ್‌ (5 ಬೌಂಡರಿ).

ಸ್ಕೋರ್‌ ಪಟ್ಟಿ
ಕರ್ನಾಟಕ
ಕೆ.ಎಲ್‌. ರಾಹುಲ್‌ ಸಿ ಎಂ.ಅಶ್ವಿ‌ನ್‌ ಬಿ ಅಶ್ವಿ‌ನ್‌ 22
ದೇವದತ್‌ ಪಡಿಕ್ಕಲ್‌ಬಿ ಸುಂದರ್‌ 32
ಅಗರ್ವಾಲ್‌ ಸಿ ಮತ್ತು ಬಿ ಅಶ್ವಿ‌ನ್‌ 0
ಮನೀಷ್‌ ಪಾಂಡೆ ಔಟಾಗದೆ 60
ಕದಮ್‌ ಸಿ ನಟರಾಜನ್‌ ಬಿ ಎಂ.ಅಶ್ವಿ‌ನ್‌ 35
ನಾಯರ್‌ ಸಿ ನಟರಾಜನ್‌ ಬಿ ಎಂ.ಅಶ್ವಿ‌ನ್‌ 17
ಇತರ 14
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 180
ವಿಕೆಟ್‌ ಪತನ: 1-39, 2-39, 3-87, 4-152, 5-180.
ಬೌಲಿಂಗ್‌: ಆರ್‌. ಅಶ್ವಿ‌ನ್‌ 4-0-34-2
ಟಿ. ನಟರಾಜನ್‌ 4-0-30-0
ವಾಷಿಂಗ್ಟನ್‌ ಸುಂದರ್‌ 4-0-28-1
ಮುರುಗನ್‌ ಅಶ್ವಿ‌ನ್‌ 3-0-33-2
ಆರ್‌. ಸಾಯಿ ಕಿಶೋರ್‌ 1-0-5-0
ಎಂ. ಸಿದ್ಧಾರ್ಥ್ 2-0-24-0
ವಿಜಯ್‌ ಶಂಕರ್‌ 2-0-21-0

Advertisement

ತಮಿಳುನಾಡು
ಶಾರೂಖ್‌ ಖಾನ್‌ ಸಿ ಸುಚಿತ್‌ ಬಿ ಗೋಪಾಲ್‌ 16
ಎಚ್‌. ನಿಶಾಂತ್‌ ಸಿ ಪಾಂಡೆ ಬಿ ಮೋರೆ 14
ಸುಂದರ್‌ ಬಿ ಗೌತಮ್‌ 24
ಕಾರ್ತಿಕ್‌ ಸ್ಟಂಪ್ಡ್ ರಾಹುಲ್‌ ಬಿ ಸುಚಿತ್‌ 20
ಬಾಬಾ ಅಪರಾಜಿತ್‌ ಸಿ ಪಾಂಡೆ ಬಿ ಮೋರೆ 40
ವಿಜಯ್‌ ಶಂಕರ್‌ ರನೌಟ್‌ 44
ಆರ್‌. ಅಶ್ವಿ‌ನ್‌ ಔಟಾಗದೆ 16
ಮುರುಗನ್‌ ಅಶ್ವಿ‌ನ್‌ ಔಟಾಗದೆ 0
ಇತರ 5
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್‌ ಪತನ: 1-26, 2-37, 3-76, 4-80, 5-151, 6-178.
ಬೌಲಿಂಗ್‌:ರೋನಿತ್‌ ಮೋರೆ 4-0-32-2
ಕೆ. ಗೌತಮ್‌ 4-0-30-1
ವಿ. ಕೌಶಿಕ್‌ 4-0-38-0
ಶ್ರೇಯಸ್‌ ಗೋಪಾಲ್‌ 4-0-37-1
ಜೆ. ಸುಚಿತ್‌ 4-0-38-1

Advertisement

Udayavani is now on Telegram. Click here to join our channel and stay updated with the latest news.

Next