Advertisement
ರವಿವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಗಳಿಸಿದ್ದು 7 ವಿಕೆಟಿಗೆ ಕೇವಲ 103 ರನ್. ದೀಪ್ತಿ ಶರ್ಮ 10 ರನ್ನಿಗೆ 4 ವಿಕೆಟ್ ಉಡಾಯಿಸಿ ಕೆರಿಬಿಯನ್ನರನ್ನು ಕಾಡಿದರು. ಇದು ದೀಪ್ತಿ ಶರ್ಮ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಅಮೋಘ ಚೇಸಿಂಗ್ ನಡೆಸಿದ ಭಾರತ ಕೇವಲ 10.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 104 ರನ್ ಬಾರಿಸಿತು.
ಇಲ್ಲೇ ನಡೆದ ಮೊದಲ ಪಂದ್ಯದಲ್ಲಿ 73 ರನ್ ಬಾರಿಸಿ ಮಿಂಚಿದ್ದ 15ರ ಹರೆಯದ ಶಫಾಲಿ ವರ್ಮ, ದ್ವಿತೀಯ ಮುಖಾಮುಖೀಯಲ್ಲೂ ಅರ್ಧ ಶತಕ ದಾಖಲಿಸಿದರು. ಶಫಾಲಿ ಗಳಿಕೆ 35 ಎಸೆತಗಳಿಂದ ಅಜೇಯ 69 ರನ್. ಇದರಲ್ಲಿ 10 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು. ಮತ್ತೋರ್ವ ಓಪನರ್ ಸ್ಮತಿ ಮಂಧನಾ ಔಟಾಗದೆ 30 ರನ್ ಮಾಡಿದರು. 28 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಸೇರಿತ್ತು. ವಿಂಡೀಸ್ ಒಂದೂ ವಿಕೆಟ್ ಉರುಳಿಸಲಾಗದೆ ಹತಾಶೆಗೊಳಗಾಯಿತು.
Related Articles
Advertisement
ಸರಣಿಯ 3ನೇ ಪಂದ್ಯ ನ. 14ರಂದು ಗಯಾನಾದ “ಪ್ರೊವಿಡೆನ್ಸ್ ಸ್ಟೇಡಿಯಂ’ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-20 ಓವರ್‌ಗಳಲ್ಲಿ 7 ವಿಕೆಟಿಗೆ 103 (ನೇಶನ್ 32, ಹ್ಯಾಲಿ 23, ನತಾಶಾ 17, ದೀಪ್ತಿ 10ಕ್ಕೆ 4, ಶಿಖಾ 18ಕ್ಕೆ 1, ರಾಧಾ 20ಕ್ಕೆ 1, ಪೂಜಾ 23ಕ್ಕೆ 1). ಭಾರತ-10.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 104 (ಶಫಾಲಿ ಔಟಾಗದೆ 69, ಮಂಧನಾ ಔಟಾಗದೆ 30). ಪಂದ್ಯಶ್ರೇಷ್ಠ: ದೀಪ್ತಿ ಶರ್ಮ.