Advertisement
ಏಳು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ರಾಯಚೂರು ಜಿಲ್ಲೆಯಲ್ಲಿ ಈಗ ಕಾಂಗ್ರೆಸ್ ಮೂರು, ಜೆಡಿಎಸ್, ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಅಧಿಕಾರದಲ್ಲಿವೆ. ಎಲ್ಲ ಕ್ಷೇತ್ರ ಗಳಲ್ಲಿ ಹಾಲಿ ಶಾಸಕರು ಮತ್ತೂಮ್ಮೆ ಗೆಲ್ಲಲು ತಂತ್ರಗಾರಿಕೆ ಶುರು ಮಾಡಿದರೆ, ಪರಾಜಿತ ಅಭ್ಯರ್ಥಿಗಳು ಕೂಡ ಪ್ರಚಾರ ಶುರು ಮಾಡಿ ಕೊಂಡಿದ್ದಾರೆ. ಇದರ ಮಧ್ಯೆ ಕೆಲ ಕ್ಷೇತ್ರಗಳಲ್ಲಿ ಹೊಸ ಮುಖಗಳ ಪ್ರವೇಶವಾ ಗುತ್ತಿದ್ದು, ಕಣ ರಂಗೇರಿಸುವ ಹುಮ್ಮಸ್ಸಿನಲ್ಲಿದ್ದಾರೆ.
Related Articles
Advertisement
ಕೇಂದ್ರ ಬಿಂದು ಮಸ್ಕಿ: ಮಸ್ಕಿ ಕ್ಷೇತ್ರದ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಈಗ ಕಾಂಗ್ರೆಸ್ ಆಡಳಿತವಿದ್ದು, ಮುಂದಿನ ಚುನಾವಣೆ ಯಲ್ಲೂ ಇದೇ ಗಾಳಿ ಮುಂದುವರಿಯಬಹುದು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ವಿರೋ ಧಿ ಅಲೆ ಬಿಜೆಪಿಯನ್ನು ನೆಲಕಚ್ಚುವಂತೆ ಮಾಡಿದೆ. ದೊಡ್ಡ ಅಂತರದಲ್ಲಿ ಬಸನಗೌಡ ತುರ್ವಿ ಹಾಳ ಗೆಲುವು ಸಾ ಧಿಸಿದರೂ ಸರ್ಕಾರ ಆಡಳಿತದಲ್ಲಿ ಇಲ್ಲದ್ದಕ್ಕೆ ಕೆಲಸಗಳಾಗಿಲ್ಲ. ಮತದಾರ ಮತ್ತೂಮ್ಮೆ ಕಾಂಗ್ರೆಸ್‌ಗೆ ಒಲವು ತೋರಿದರೂ ಅಚ್ಚರಿ ಇಲ್ಲ. ಸಿಂಧನೂರಲ್ಲಿ ಕೈ-ದಳ ಕಸರತ್ತು: ಸಾಮಾನ್ಯ ವರ್ಗಕ್ಕೆ ಮೀಸಲಾದ ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಹಣಾಹಣಿ ಯಿದ್ದು, ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಇಲ್ಲಿಯೂ ಒಮ್ಮೆ ಕಾಂಗ್ರೆಸ್, ಮತ್ತೂಮ್ಮೆ ಜೆಡಿಎಸ್ ಗೆಲ್ಲುತ್ತಿವೆ. ಕಾಂಗ್ರೆಸ್ ಯುವ ಮುಖಂಡ ಬಸನಗೌಡ ಬಾದರ್ಲಿ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಸಂಕಷ್ಟ ಏರ್ಪಟ್ಟಿದೆ. ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಜೆಡಿಎಸ್‌ನಲ್ಲೇ ಭದ್ರವಾಗಿದ್ದಾರೆ.
ಮಾನ್ವಿಯಲ್ಲಿ ಜೆಡಿಎಸ್ ಬಲ: ಕಾಂಗ್ರೆಸ್ ಭದ್ರಕೋಟೆಯನ್ನು ಬೇಧಿಸುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು. ಬಿಜೆಪಿ ಉತ್ತಮ ಪೈಪೋಟಿ ನೀಡಿತ್ತಾದರೂ ಇನ್ನೂ ಹೆಚ್ಚು ಶ್ರಮಿಸಬೇಕಿದೆ. ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೂಮ್ಮೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಸಿಕ್ಕರೆ ಮಾತ್ರ ಈ ಬಾರಿ ಜೆಡಿಎಸ್ ಮಣಿಸಲು ಸಾಧ್ಯ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದ ಮೇಲೆ ಕೆಲ ಶಾಸಕರು ಕಣ್ಣಿಟ್ಟಿದ್ದು, ಈ ಕ್ಷೇತ್ರಕ್ಕೆ ವಲಸೆ ಹೋಗುವ ಲೆಕ್ಕಾಚಾರದಲ್ಲಿದ್ದಾರೆ.
ಲಿಂಗಸುಗೂರಲ್ಲಿ ಪೈಪೋಟಿ ಜೋರು: ಪ.ಜಾತಿಗೆ ಮೀಸಲಾದ ಏಕೈಕ ಕ್ಷೇತ್ರ ಲಿಂಗಸುಗೂರು. ಕಾಂಗ್ರೆಸ್‌ನ ಹಾಲಿ ಶಾಸಕ ಡಿ.ಎಸ್.ಹೂಲಗೇರಿ ಮತ್ತೂಮ್ಮೆ ಸ್ಪರ್ಧೆಗೆ ಅಣಿಯಾಗುತ್ತಿದ್ದರೆ, ಕೂದಲೆಳೆ ಅಂತರದಲ್ಲಿ ಸೋಲುಂಡ ಜೆಡಿಎಸ್‌ನ ಸಿದ್ದು ಬಂಡಿ, ಬಿಜೆಪಿಯ ಮಾನಪ್ಪ ವಜ್ಜಲ್ ಕೂಡ ಮರು ಸ್ಪರ್ಧೆಗೆ ಸಿದ್ಧಗೊಳ್ಳುತ್ತಿದ್ದಾರೆ. ಹೊಸ ಮುಖಗಳ ಪ್ರವೇಶ ಸಾಧ್ಯತೆ ಕಡಿಮೆ ಇದೆಯಾದರೂ ಈಗಿರುವ ಮೂವರು ಆಕಾಂಕ್ಷಿಗಳಲ್ಲಿ ಪೈಪೋಟಿ ಜೋರಾಗಿದೆ.
●ಸಿದ್ಧಯ್ಯಸ್ವಾಮಿ ಕುಕನೂರು