Advertisement

ಮತ್ತೆ ಎಳೆಯರು ಗೆಳೆಯರು

10:44 AM Aug 28, 2017 | |

ನಾಗರಾಜ್‌ ಗೋಪಾಲ್‌ ಅವರು ನಿರ್ಮಿಸಿರುವ “ಎಳೆಯರು ನಾವು ಗೆಳೆಯರು’ ಮಕ್ಕಳ ಚಿತ್ರ ಕೆಲವು ತಿಂಗಳ ಹಿಂದೆ ತೆರೆ ಕಂಡಿತ್ತು. ಮಕ್ಕಳ ಚಿಂತನೆ, ಉದ್ದೇಶದ ಸುತ್ತ ಈ ಸಿನಿಮಾ ಮಾಡಲಾಗಿತ್ತು. ಈಗ ಈ ಚಿತ್ರವನ್ನು ಮತ್ತೂಮ್ಮೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.  ಚಿತ್ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ಕೆಲವು ಕಡೆ ಬಿಡುಗಡೆಯಾಗಲಿದೆ.

Advertisement

ವಿಕ್ರಂ ಸೂರಿ ನಿರ್ದೇಶನದ ಈ ಚಿತ್ರಕ್ಕೆ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನ, ಅಶೋಕ್‌ ವಿ ರಾಮನ್‌ ಅವರ ಛಾಯಾಗ್ರಹಣವಿದೆ. ಬಿ.ಎಸ್‌.ಕೆಂಪರಾಜ್‌ ಸಂಕಲನ, ವಿಕ್ರಂಸಿಂಗ್‌ ಸಾಹಸ ನಿರ್ದೇಶನ, ಮದನ್‌ – ಹರಿಣಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

ಡ್ರಾಮಾ ಜ್ಯೂನಿಯರ್ಸ್‌ ಖ್ಯಾತಿಯ ಅಚಿಂತ್ಯ, ನಿಹಾಲ್‌, ಅಭಿಷೇಕ್‌, ಅಮೋಘ, ತುಷಾರ್‌, ಪುಟ್ಟರಾಜು, ಮಹೇಂದ್ರ, ಸೂರಜ್‌, ತೇಜಸ್ವಿನಿ, ಮಹತಿ ಹಾಗೂ ಹಿರಿಯ ಕಲಾವಿದರಾದ ಶಂಕರ್‌ ಅಶ್ವತ್‌, ಕೆ.ಎಸ್‌.ಪರಮೇಶ್ವರ್‌, ಹರಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next