ಅರಂತೋಡು: ಸಂಪಾಜೆ ಭಾಗದಲ್ಲಿ ಸಂಜೆ 4:40 ಕ್ಕೆ ಮತ್ತೆ ಭೂಕಂಪದ ಅನುಭವ ಆಗಿದೆ ಎನ್ನಲಾಗಿದೆ.ತೊಡಿಕಾನ ಅರಂತೋಡು,ಅಡ್ತಲೆ ಕಲ್ಲುಗುಂಡಿ ಭಾಗದಲ್ಲಿಈ ಬಗ್ಗೆ ಸಂಪಾಜೆ ಹಲವರಿಗೆ ಲಘು ಕಂಪನದ ಅನುಭವ ಆಗಿದೆ . ಕೆಲವರು ದೂರವಾಣಿ ಮೂಲಕ ತಮಗಾದ ಅನುಭವ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 7.45 ಕ್ಕೆ ಭೂಮಿ ಭಾರಿ ಸದ್ದಿನೊಂದಿಗೆ ಕಂಪಿಸಿತ್ತು . ಸಂಪಾಜೆ ಗೂನಡ್ಕ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭಾರಿ ಕಂಪನವಾಗಿತ್ತು . ರಿಕ್ಟರ್ ಮಾಪಕದಲ್ಲಿ 3 ರ ತೀವ್ರತೆ ಹೊಂದಿದ್ದ ಕಂಪನದಿಂದ ಜನರು ಭಯಭೀತರಾಗಿದ್ದಾರೆ
ಕಾಸರಗೋಡಿನಲ್ಲೂ ಭೂಕಂಪನ:
ಸುಳ್ಯ, ಸಂಪಾಜೆ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾದ ಬೆನ್ನಲ್ಲೇ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಕಲ್ಲಪಳ್ಳಿ ಪರಿಸರದಲ್ಲಿಯೂ ಮಂಗಳವಾರ ಬೆಳಗ್ಗೆ ಭೂ ಕಂಪನವಾಗಿರುವ ಬಗ್ಗೆ ವರದಿಯಾಗಿದೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5ರಷ್ಟಿತ್ತು ಎಂದು ಮೂಲಗಳು ತಿಳಿಸಿವೆ. ಭೂಕಂಪನದಿಂದ ಸ್ಥಳೀಯರಲ್ಲಿ ಭೀತಿ ಮೂಡಿಸಿರುವುದಾಗಿ ವರದಿ ತಿಳಿಸಿದೆ.