Advertisement

ಮತ್ತೆ ಎರಡು ದೇಶಗಳಲ್ಲಿ ಎಚ್‌ಸಿಕ್ಯು ಬಳಕೆಗೆ ತಡೆ

03:03 PM May 29, 2020 | mahesh |

ಪ್ಯಾರಿಸ್‌: ಯುರೋಪಿಯನ್‌ ಒಕ್ಕೂಟದ ರಾಷ್ಟ್ರಗಳ ಪೈಕಿ ಫ್ರಾನ್ಸ್‌ ಬಳಿಕ ಇಟಲಿ ಹಾಗೂ ಬೆಲ್ಜಿಯಂ ಕೋವಿಡ್‌ ಸೋಂಕು ನಿವಾರಣೆ ಪ್ರಯತ್ನವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧ ಬಳಸುವುದನ್ನು ನಿರ್ಬಂಧಿಸಿವೆ. ಈ ಔಷಧ ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಅನುಮಾನ ಅವುಗಳನ್ನು ಕಾಡುತ್ತಿದೆ. ಇದೇ ಅವಧಿಯಲ್ಲಿ ದ. ಕೊರಿಯಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಕಾಣುವ ಭೀತಿ ಎದುರಿಸುತ್ತಿದೆ. ಆಫ್ರಿಕಾದಲ್ಲಿ ಆಹಾರದ ಕೊರತೆ ಎದುರಾಗಬಹುದೆಂದು ವಿಶ್ವ ಸಂಸ್ಥೆ ಎಚ್ಚರಿಸಿದೆ. ಸಿರಿಯಾದಲ್ಲಿ ಮಸೀದಿ ತೆರೆಯಲಾಗಿದೆ.

Advertisement

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಅವರು ಕೋವಿಡ್‌-19 ಸೋಂಕಿತರ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್‌ ಬಳಸುವಂತೆ ಉತ್ತೇಜನ ನೀಡುತ್ತಿದ್ದರೂ ಫ್ರಾನ್ಸ್‌, ಇಟಲಿ ಹಾಗೂ ಬೆಲ್ಜಿಯಂ ಹಿಂದೇಟು ಹಾಕಿವೆ. ತೀವ್ರತರದ ಲಕ್ಷಣಗಳಿರುವ ರೋಗಿಗಳ ಮೇಲೆ ಮಾತ್ರ ಈ ಔಷಧವನ್ನು ಪ್ರಯೋಗಿಸು ವಂತೆ ಫ್ರಾನ್ಸ್‌ ಸೂಚನೆ ನೀಡಿದ್ದರೆ, ಕ್ಲಿನಿಕಲ್‌ ಪ್ರಯೋಗ ಹೊರತು ಪಡಿಸಿ ಅದನ್ನು ಬಳಕೆ ಮಾಡದಂತೆ ಇಟಲಿ ಮತ್ತು ಬೆಲ್ಜಿಯಂ ಸರಕಾರಗಳು ಎಚ್ಚರಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಕ್ಸ್‌ಫ‌ರ್ಡ್‌ ವಿವಿ ಈ ಔಷಧದ ಪ್ರಯೋಗವನ್ನು ಸ್ಥಗಿತಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಸುಮಾರು 671 ಆಸ್ಪತ್ರೆಗಳಲ್ಲಿ 10 ಸಾವಿರ ರೋಗಿಗಳ ಹೇಳಿಕೆ ಆಧರಿಸಿ ಲಾನ್ಸೆಟ್‌ ವೈದ್ಯಕೀಯ ಪತ್ರಿಕೆ ಪ್ರಕಟಿಸಿದ ಲೇಖನದಲ್ಲೂ, ಈ ಔಷಧದಿಂದ ಮರಣ ಪ್ರಮಾಣ ಹೆಚ್ಚುವ ಸಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next