ಅಫಜಲಪುರ: ಪುರಸಭೆಗೆ ಪ್ರತಿ ವರ್ಷ ಅಭಿವೃದ್ಧಿ ಕೆಲಸಗಳಿಗಾಗಿ ಲಕ್ಷಾಂತರ ರೂ. ಬರುತ್ತದೆ. ಈ ಅನುದಾನ ಖರ್ಚಾದರೂ ಅಭಿವೃದ್ಧಿ ಮಾತ್ರ ಆಗುವುದಿಲ್ಲ. ಪುರಸಭೆ ನಿರ್ಲಕ್ಷ್ಯದಿಂದ ಪಟ್ಟಣವೆಲ್ಲ ಗಬ್ಬೆದ್ದು ನಾರುವಂತಾಗಿದೆ.
Advertisement
ಪಟ್ಟಣದ 23 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ಸರಿಯಾದ ರಸ್ತೆಗಳಿಲ್ಲ, ಚರಂಡಿಗಳಿಲ್ಲ. ಮಳೆ-ಚರಂಡಿ ನೀರು ಒಂದಾಗಿ ರಸ್ತೆಗಳ ಮೇಲೆ ಹರಿದಾಡಿ ಅದರಲ್ಲಿ ಹಂದಿಗಳು ಒದ್ದಾಡಿ ಸಂಕ್ರಾಮಿಕ ರೋಗದ ತಾಣವಾಗಿ ಪಟ್ಟಣ ಮಾರ್ಪಾಡಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಪುರಸಭೆ ಕಣ್ಣುಮುಚ್ಚಿ ಕುಳಿತಿದೆ.
Related Articles
Advertisement
ಅಭಿವೃದ್ಧಿ ಆಗೋದು ಯಾವಾಗ?: ಅಭಿವೃದ್ಧಿ ಹೆಸರಿನಲ್ಲಿ ಪುರಸಭೆ ವತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ. ಕ್ರಿಯಾ ಯೋಜನೆ ಸಿದ್ಧವಾಗುತ್ತಿವೆ, ಕಾಮಗಾರಿಗಳಾಗುತ್ತಿವೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಇದಕ್ಕೆಲ್ಲ ಪುರಸಭೆಯವರೇ ಉತ್ತರ ನೀಡಬೇಕು. ಪಟ್ಟಣಕ್ಕೆ ಮಾಸ್ಟರ್ ಪ್ಲ್ಯಾನ್ ಆಗಬೇಕಿತ್ತು. ಪಟ್ಟಣದ ರಸ್ತೆಗಳ ಸುಧಾರಣೆ, ಚರಂಡಿ ಸುಧಾರಣೆ ಆಗಬೇಕಾಗಿತ್ತು. ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯ ಸಿಗಬೇಕಿತ್ತು. ಆದರೆ ಯಾವುದೂ ಆಗುತ್ತಿಲ್ಲ.