Advertisement

ಎರಡೂವರೆ ತಿಂಗಳ ಬಳಿಕ ಟೆನಿಸ್‌ ಅಭ್ಯಾಸಕ್ಕಿಳಿದ ಪ್ರಜ್ಞೇಶ್

10:45 AM Jun 14, 2020 | Sriram |

ಚೆನ್ನೈ: ಎರಡೂವರೆ ತಿಂಗಳ ಲಾಕ್‌ಡೌನ್‌ ವಿರಾಮದ ಬಳಿಕ ಭಾರತದ ಅಗ್ರಮಾನ್ಯ ಟೆನಿಸ್‌ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ ಅಂಗಳಕ್ಕಿಳಿದಿದ್ದಾರೆ.

Advertisement

ಇಲ್ಲಿನ “ನುಂಗಂಬಾಕಮ್‌ ಸ್ಟೇಡಿಯಂ’ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರಿಗೆ ಶಶಿಕುಮಾರ್‌ ಮುಕುಂದ್‌ ಮತ್ತು ಮನೀಷ್‌ ಸುರೇಶ್‌ ಕುಮಾರ್‌ ಜತೆ ನೀಡಿದರು.

“ಬಹಳ ಸಮಯದ ಬಳಿಕ ಟೆನಿಸ್‌ ಆಡುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಲಯಕ್ಕೆ ಮರಳಲು ಸತತ ಅಭ್ಯಾಸ ಅಗತ್ಯ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಹಿಡಿಯುತ್ತದೆ’ ಎಂದು ವಿಶ್ವದ 132ನೇ ರ್‍ಯಾಂಕಿಂಗ್‌ ಆಟಗಾರ ಪ್ರಜ್ಞೇಶ್ ಹೇಳಿದರು.

ತಮಿಳುನಾಡು ಟೆನಿಸ್‌ ಅಸೋಸಿಯೇಶನ್‌ ಈ ಮೂವರ ಅಭ್ಯಾಸಕ್ಕೆ ಅನುಮತಿ ನೀಡಿತ್ತು. ಇವರಲ್ಲಿ ಮುಕುಂದ್‌ ಮತ್ತು ಮನೀಷ್‌ ಗುರುವಾರವೇ ಅಭ್ಯಾಸ ಆರಂಭಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next