Advertisement

ಟಾಯ್ಲೆಟ್‌ ಕಟ್ಟಿಸಿದ ಅಕ್ಷಯ್‌

09:50 AM Apr 04, 2018 | Karthik A |

ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಂಬೈನ ಜುಹು ಸಮುದ್ರ ತೀರದಲ್ಲಿ ಸಂಚಾರಿ ಶೌಚಾಲಯ ನಿರ್ಮಿಸಿದ್ದಾರೆ. ಕಳೆದ ತಿಂಗಳಷ್ಟೇ ಅವರ ಪತ್ನಿ ಟ್ವಿಂಕಲ್‌ ಖನ್ನಾ ಅವರು ಮುಂಬೈನ ಸಮುದ್ರ ತೀರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ ಫೋಟೊವನ್ನು ಟ್ವೀಟ್‌ ಮಾಡಿ, ಸಮುದ್ರ ತೀರ ಕಲುಷಿತವಾಗುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ, ಅಕ್ಷಯ್‌ ಕುಮಾರ್‌ ಜುಹು ಸಮುದ್ರ ತೀರದ ಬಳಿ ಸಂಚಾರಿ ಶೌಚಾಲಯ ನಿರ್ಮಿಸುವಂತೆ ಸ್ಥಳೀಯಾಡಳಿತಕ್ಕೆ ಕೋರಿದ್ದು, ಅದರ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದಾರೆ. ಇದಕ್ಕೆ 10 ಲಕ್ಷ ರೂ. ವೆಚ್ಚವಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಆಯುಕ್ತರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next