Advertisement

Tollywood: ʼಫ್ಯಾಮಿಲಿ ಸ್ಟಾರ್‌ʼ ಸೋಲಿನ ಬಳಿಕ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದೇವರಕೊಂಡ

04:32 PM May 04, 2024 | Team Udayavani |

ಹೈದರಾಬಾದ್: ʼಅರ್ಜುನ್‌ ರೆಡ್ಡಿʼ ನಟ ವಿಜಯ್‌ ದೇವರಕೊಂಡ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ವಿಜಯ್‌ ದೇವರಕೊಂಡ ಇತ್ತೀಚೆಗೆ ʼದಿ ಫ್ಯಾಮಿಲಿ ಸ್ಟಾರ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಿತ್ತು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಸೋತಿತ್ತು. ಸಿನಿಮಾಕ್ಕೆ ನಿರಾಶದಾಯಕ ಪ್ರತಿಕ್ರಿಯೆ ಬಂತು. ದೇವರಕೊಂಡ ಅವರ ಕಳೆದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ.

“ದಿ ಫ್ಯಾಮಿಲಿ ಸ್ಟಾರ್”‌ ಬಳಿಕ ಇದೀಗ ದೇವರಕೊಂಡ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.  ಈ ಹಿಂದೆ ಟಾಲಿವುಡ್‌ ನಲ್ಲಿ ʼರಾಜಾ ವರು ರಾಣಿ ಗಾರುʼ  ಸಿನಿಮಾವನ್ನು ಮಾಡಿ ಗಮನ ಸೆಳೆದಿದ್ದ ರವಿಕಿರಣ್‌ ಕೋಲ ಅವರೊಂದಿಗೆ ದೇವರಕೊಂಡ ಮುಂದಿನ ಸಿನಿಮಾವನ್ನು ಮಾಡಲಿದ್ದಾರೆ.

ಮೂಲಗಳ ಪ್ರಕಾರ ಇದೊಂದು ಹೈ ಆಕ್ಟೇನ್‌ ಮಾಸ್‌ ಸಿನಿಮಾವಾಗಲಿದೆ ಎನ್ನಲಾಗಿದೆ.  ಈ ಸಿನಿಮಾವನ್ನು ದಿಲ್‌ ರಾಜು ಅವರು ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.

ಸದ್ಯ ದೇವರಕೊಂಡ ಗೌತಮ್ ತಿನ್ನನೂರಿ ನಿರ್ದೇಶನದ ʼವಿಡಿ12ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next