Advertisement

Women: ಜನಗಣತಿ ಬಳಿಕ ಮಹಿಳಾ ಮೀಸಲು ಮಸೂದೆ ಜಾರಿ

10:35 PM Nov 03, 2023 | Team Udayavani |

ನವದೆಹಲಿ: ಕೇಂದ್ರಸರ್ಕಾರದ ನಾರಿಶಕ್ತಿ ವಂದನ್‌ ಅಧಿನಿಯಮ್‌ ಮಹಿಳಾ ಮೀಸಲು ಮಸೂದೆಯ ತಕ್ಷಣದ ಅನುಷ್ಠಾನಕ್ಕೆ ಆದೇಶಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

Advertisement

ಜನಗಣತಿಯ ಬಳಿಕ ಮಸೂದೆ ಅನುಷ್ಟಾನಗೊಳ್ಳಲಿದೆ ಎಂದು ತಿಳಿಸಿದೆ. ಕಾಂಗ್ರೆಸ್‌ ನಾಯಕಿ ಜಯ ಠಾಕೂರ್‌ ಅವರು ಮಸೂದೆ ಅನುಷ್ಠಾನಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾ. ಸಂಜೀವ್‌ ಖನ್ನಾ ನೇತೃತ್ವದ ನ್ಯಾಯಪೀಠ ಸಮ್ಮತಿಸಿದು, ನ.22ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಕಾಯ್ದೆ ಜಾರಿ ವಿಚಾರದಲ್ಲಿ ಹಲವು ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಜನಗಣತಿ ಬಳಿಕವೇ ಮಸೂದೆ ಜಾರಿಯಾಗಲಿದೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next