ಲೂಧಿಯಾನ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವಿರುದ್ಧ ಒಂದು ವರ್ಷದ ಪ್ರತಿಭಟನೆಯನ್ನು ರೈತ ಸಂಘಟನೆಗಳು ಕೈಬಿಟ್ಟಿದ್ದವು. ಇದರ ಬೆನ್ನಲ್ಲೇ ಸಂಝಾ ಮೋರ್ಚಾ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ನ 9 ಕಡೆಗಳಲ್ಲಿ ರೈಲು ತಡೆಯನ್ನು ಆರಂಭಿಸಿವೆ.
ಇದು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇದನ್ನೂ ಓದಿ:ಹೆಲಿಕಾಪ್ಟರ್ ಪತನ: ಪ್ರತ್ಯಕ್ಷದರ್ಶಿಯ ಮೊಬೈಲ್ ಫೊರೆನ್ಸಿಕ್ ಪರೀಕ್ಷೆಗೆ
ವಿದ್ಯುತ್ ಬಿಲ್ ಕಟ್ಟದ ಕಾರಣಕ್ಕೆ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಬೇಕು, ಸಣ್ಣ ಹಣಕಾಸು ಕಂಪನಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು, ಅಗತ್ಯ ರೈತ ಕುಟುಂಬಗಳಿಗೆ ಜಾಗವನ್ನು ಮಂಜೂರು ಮಾಡಬೇಕು, ಹಾಗೆಯೇ ದಲಿತರಿಗೆಂದು ವಿವಿಧ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಮೀಸಲಿಟ್ಟಿರುವ ಕೃಷಿ ಜಾಗವನ್ನು ಅರ್ಹ ದಲಿತರಿಗೆ ಮಾತ್ರ ಸಿಗುವಂತೆ ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.