Advertisement

ʼPushpa 2ʼ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರಾ ಈ ಖ್ಯಾತ ಬಾಲಿವುಡ್‌ ಬ್ಯೂಟಿ?

04:13 PM Mar 07, 2024 | Team Udayavani |

ಹೈದರಾಬಾದ್: ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಕುತೂಹಲ ದಿನ ಕಳೆದಂತೆ ಹೆಚ್ಚಾಗಿದೆ.

Advertisement

ʼಪುಷ್ಪʼ ಸಿನಿಮಾದ ಸೀಕ್ವೆಲ್‌ ಶೂಟಿಂಗ್‌ ಹಂತದಲ್ಲಿರುವಂತೆಯೇ ಸಿನಿಮಾದ ಮೂರನೇ ಭಾಗವೂ ತೆರೆಕಾಣಲಿದೆ ಎನ್ನುವ ಮಾತುಗಳು ಟಾಲಿವುಡ್‌ ನಲ್ಲಿ ಹರಿದಾಡುತ್ತಿದೆ.

ʼಪುಷ್ಪ-2ʼ: ದಿ ರೂಲ್‌ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿರುವ ಫಾಹದ್‌ ಫಾಸಿಲ್‌ ಹಾಗೂ ʼಪುಷ್ಪರಾಜ್ʼ ಆಗಿರುವ ಅಲ್ಲು ಅರ್ಜುನ್‌ ಅವರ ಪಾತ್ರದ ಮುಖಾಮುಖಿಯೇ ಸೀಕ್ವೆಲ್‌ ನಲ್ಲಿ ಸದ್ದು ಮಾಡಲಿದೆ.

ʼಪುಷ್ಪʼ ಸಿನಿಮಾದಲ್ಲಿ ನಟಿ ಸಮಂತಾ  ʼಊ ಅಂಟವಾʼ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಐಟಂ ನಂಬರ್‌ ಹಾಡು ಸಾಕಷ್ಟು ಸದ್ದು ಮಾಡಿತ್ತು. ʼಪುಷ್ಪ-2ʼ ಸಿನಿಮಾದಲ್ಲೂ ಐಟಂ ಹಾಡೊಂದು ಇರಲಿದ್ದು, ಇದರಲ್ಲಿ ಬಿಟೌನ್‌ ಬ್ಯೂಟಿಯೊಬ್ಬರು ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.

ನಟಿ ಜಾಹ್ನವಿ ಕಪೂರ್‌ ಅವರು ʼಪುಷ್ಪ-2ʼ ಸಿನಿಮಾದಲ್ಲಿ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲು ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಆದರೆ ಇದುವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಜಾಹ್ನವಿ ಅವರು ಹಾಡಿನಲ್ಲಿ ಹೆಜ್ಜೆ ಹಾಕುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Advertisement

ಜಾಹ್ನವಿ ಕಪೂರ್  ʼದೇವರʼ ಹಾಗೂ ರಾಮ್‌ ಚರಣ್‌ ಅವರ ‘RC16’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಅವರು ಸೌತ್‌ ಸಿನಿಮಾಕ್ಕೆ ಎಂಟ್ರಿ ಆಗಲಿದ್ದಾರೆ.

ಸುಕುಮಾರ್‌ ನಿರ್ದೇಶನದ ʼಪುಷ್ಪ-2ʼ ಪ್ಯಾನ್‌ ಇಂಡಿಯಾದಲ್ಲಿ ಇದೇ ವರ್ಷದ ಆಗಸ್ಟ್‌ 15 ರಂದು ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next