Advertisement

ಅಟಲ್‌ ಆಯ್ತು, ಈಗ ಶಿಂಕು-ಲಾ ಸುರಂಗ: ಮೂರು ವರ್ಷದಲ್ಲಿ ಕಾಮಗಾರಿ ಮುಗಿಸಲು ಮೋದಿ ಸೂಚನೆ

12:47 PM Oct 05, 2020 | keerthan |

ಹೊಸದಿಲ್ಲಿ: 9.2 ಕಿ.ಮೀ. ಉದ್ದದ ಅಟಲ್‌ ಸುರಂಗ ಉದ್ಘಾಟನೆ ಬೆನ್ನಲ್ಲೇ ಲಡಾಖ್‌ಗೆ ಸಂಪರ್ಕ ಬೆಸೆಯುವ ಶಿಂಕು-ಲಾ ಪಾಸ್‌ ಬಳಿ ಸುರಂಗ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಗಡಿ ರಸ್ತೆಗಳ ಸಂಸ್ಥೆಗೆ (ಬಿಆರ್‌ಒ) ಸೂಚಿಸಿದ್ದಾರೆ.

Advertisement

ದಾರ್ಚಾ- ಪದಂ- ನಿಮು ಮಾರ್ಗ ಮುಖೇನ ಲಡಾಖ್‌ಗೆ ಸಂಪರ್ಕ ಬೆಸೆಯುವ “ಸರ್ವಋತು ರಸ್ತೆ’ಯಲ್ಲಿ ಶಿಂಕು- ಲಾ ಸುರಂಗ ನಿರ್ಮಾಣಗೊಳ್ಳಲಿದ್ದು, ಮುಂದಿನ 3 ವರ್ಷದೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಬಿಆರ್‌ಒಗೆ ಪ್ರಧಾನಿ ಗಡುವು ನೀಡಿದ್ದಾರೆ.

ಇದನ್ನೂ ಓದಿ:‘ಬೆಲ್ಟ್ ಆ್ಯಂಡ್‌ ರೋಡ್‌’ ಯೋಜನೆ ನಿರ್ಮಿಸಲು ಸಿದ್ಧ: ಬಾಂಗ್ಲಾ ಜತೆಗೆ ಚೀನ ಸ್ನೇಹದ ನಾಟಕ

ಈಗಾಗಲೇ 100 ಕಿ.ಮೀ.ವರೆಗೆ ಕಾಮಗಾರಿ ಸಾಗಿದ್ದು, 3 ವರ್ಷಗಳಲ್ಲಿ 200 ಕಿ.ಮೀ. ಪೂರ್ಣಗೊಳ್ಳಲಿದೆ. 16 ಸಾವಿರ ಅಡಿ ಎತ್ತರದಲ್ಲಿನ ಶಿಂಕ್‌ ಲಾ ಪಾಸ್‌ ಬಳಿ 4.5 ಕಿ.ಮೀ. ಉದ್ದದ ಸುರಂಗ ನಿರ್ಮಾಣವಾಗಲಿದೆ. ಚೀನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ ಸರ್ವಋತು ರಸ್ತೆ ನಿರ್ಮಾಣ ಭದ್ರತಾ ಪಡೆಗೆ ವರದಾನವಾಗಲಿದೆ.

ಇದನ್ನೂ ಓದಿ: ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್‌ ರೋಶ್‌’ಗೆ ಬೆಚ್ಚಿ ಬೀಳುವ ಉಗ್ರರು

Advertisement
Advertisement

Udayavani is now on Telegram. Click here to join our channel and stay updated with the latest news.

Next