ಹೊಸದಿಲ್ಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರದ ಪ್ರವಾಸವನ್ನು ಮುಗಿಸಿ ಮರಳಿದ ಮೂರು ದಿನಗಳ ತರುವಾಯ ಇಂದು ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಅಮೇಠಿಗೆ ಭೇಟಿ ನೀಡಲಿದ್ದಾರೆ.
ಅಮಿತ್ ಶಾ ಅವರು ಅಮೇಠಿ, ಸೀತಾಪುರ ಮತ್ತು ಲಕ್ನೋ ಜಿಲ್ಲೆಗಳಲ್ಲಿ ಅ.10ರಂದು (ಇಂದು ಮಂಗಳವಾರ) ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷರ ಕಾರ್ಯಾಲಯದ ಪತ್ರಿಕಾ ಪ್ರಕಟನೆ ತಿಳಿಸಿದೆ.
ಅಮೇಠಿಯಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಅಮಿತ್ ಶಾ ಅವರು ಆ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಎದುರಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಕೇಂದ್ರ ಜವುಳಿ, ವಾರ್ತಾ ಮತ್ತು ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ ಅವರು ಈಗಾಗಲೇ ಅಮೇಠಿ ತಲುಪಿದ್ದಾರೆ.
ಈ ಇಬ್ಬರೂ ಬಿಜೆಪಿ ನಾಯಕರನ್ನು ಕಾಣಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಮೇಠಿಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.