ಮುಂಬೈ: ಪೆಂಗ್ವಿನ್‌ಗಳ ಬಳಿಕ ಈಗ ಬೈಕುಲ್ಲಾ ಝೂ ವಿಶ್ವದ ಅತಿದೊಡ್ಡ ಹಾವು ಅನಕೊಂಡಗೆ ಆಶ್ರಯ ನೀಡಲು ಯೋಜಿಸಿದೆ.
ಅನಕೊಂಡ ಸೇರಿದಂತೆ ದೇಶ- ವಿದೇಶಗಳ 20 ಪ್ರಭೇದದ ಹಾವುಗಳಿಗೆ ಆಶ್ರಯ ಕೋರಿ ಬೈಕುಲ್ಲಾ ಝೂ ನಿರ್ದೇಶಕ ಸಂಜಯ್ ತ್ರಿಪಾಠಿ, ಕೇಂದ್ರ ಪ್ರಾಣಿಸಂಗ್ರಹಾಲಯ ಪ್ರಾಧಿಕಾರಕ್ಕೆ (ಸಿಝೆಡ್‌ಎ) ಮನವಿ ಮಾಡಿದ್ದಾರೆ. ಶೀಘ್ರವೇ ಇದಕ್ಕೆ ಸಿಝೆಡ್‌ಎ ಅನುಮೋದನೆ ನೀಡುವ ಸಾಧ್ಯತೆ ಇದೆ.
ಬಿಎಂಸಿ ಉಸ್ತುವಾರಿಯ ಬೈಕುಲ್ಲಾ ಝೂನಲ್ಲಿ ಹಾವುಗಳಿಗಾಗಿಯೇ ದೊಡ್ಡ ಮನೆಯಿದೆ. ಹಿಪ್ಪೋಪೊಟಾಮಸ್ ನೆಲೆಯ ಪಕ್ಕದಲ್ಲಿಯೇ 1,500 ಚದರ ಮೀಟರ್ ಜಾಗವನ್ನು ವಿವಿಧ ರೀತಿಯ ಹಾವುಗಳಿಗಾಗಿ ಮೀಸಲಿಡಲಾಗಿದೆ.
ಇದನ್ನೂ ಓದಿ:ಭಕ್ತಾದಿಗಳ ನಿಷೇಧದ ನಡುವೆಯೂ ಮಾದಪ್ಪನಿಗೆ ಸಾಂಪ್ರದಾಯಿಕ ಹಾಲರುವೆ ಉತ್ಸವ
ಅನಕೊಂಡ ಜತೆಗೆ ಇಂಡಿಯನ್ ರಾಕ್ ಹೆಬ್ಟಾವು, ಇಂಡಿಯನ್ ಕೋಬ್ರಾ, ರ್ಯಾಟ್ ಸ್ನೇಕ್, ಟಿಂಕೆಟ್ ಸ್ನೇಕ್, ರೆಡ್ ಸ್ಯಾಂಡ್ ಬೋ, ಕಾಮನ್ ಸ್ಯಾಂಡ್ ಬೋ- ಮುಂತಾದ ಹಾವುಗಳು ಅನಕೊಂಡ ಜತೆಗೆ ಝೂ ಪ್ರವೇಶಿಸುವ ನಿರೀಕ್ಷೆಯಿದೆ.