Advertisement

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

02:32 PM Jan 10, 2025 | Team Udayavani |

ಮುಂಬೈ: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಥಾನ ಸಂಕಷ್ಟದಲ್ಲಿದೆ. ಆದರೆ ಕಳಪೆ ಪ್ರದರ್ಶನ ನೀಡಿದರೂ ಮತ್ತೊಬ್ಬ ಹಿರಿಯ ಆಟಗಾರ ರವೀಂದ್ರ ಜಡೇಜಾ ಅವರ ಬಗ್ಗೆ ಹೆಚ್ಚು ಚರ್ಚೆಗೆ ನಡೆದಿಲ್ಲ.

Advertisement

ಭಾರತ 1-3 ಅಂತರದಲ್ಲಿ ಸೋತ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡರ್ ಆಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಜಡೇಜಾ ವಿಫಲರಾಗಿದ್ದಾರೆ. ಜಡೇಜಾ ಮೂರು ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು ಮತ್ತು 27 ಸರಾಸರಿಯಲ್ಲಿ ಬ್ಯಾಟಿಂಗ್‌ನಲ್ಲಿ 135 ರನ್‌ಗಳನ್ನು ಗಳಿಸಿದ್ದರು.

ಇದೀಗ ವರದಿಯ ಪ್ರಕಾರ, ಅನುಭವಿ ಆಟಗಾರನ ಪ್ರದರ್ಶನವು ಪರಿಶೀಲನೆಯಲ್ಲಿದೆ. ಬಿಸಿಸಿಐ ಆಯ್ಕೆ ಸಮಿತಿಯು ಅವರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆಯ್ಕೆದಾರರು ಈಗ ಜಡೇಜಾ ಮೀರಿ ಯುವ ಆಟಗಾರರತ್ತ ನೋಡಲು ಬಯಸುತ್ತದೆ ಎನ್ನಲಾಗಿದೆ.

“2027 ರ ಏಕದಿನ ವಿಶ್ವಕಪ್‌ ಗಾಗಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬಲವಾದ ತಂಡ ರಚಿಸಲು ಬಯಸುತ್ತಿದ್ದಾರೆ. ಅವರು ಇನ್ನೂ ಕೆಲವು ಗುರುತಿಸಲ್ಪಟ್ಟ ಆಟಗಾರರಿಗೆ ಅವಕಾಶ ನೀಡಲು ಉತ್ಸುಕರಾಗಿದ್ದಾರೆ” ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಇದು ಆಯ್ಕೆದಾರರು ಪರಿವರ್ತನೆಯನ್ನು ಯಾವಾಗ ಪ್ರಾರಂಭಿಸಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅವರು ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಬೇಕೆ ಅಥವಾ ಈಗಲೇ ಅವರ ಹೊರತಾಗಿ ನೋಡಬೇಕೆ ಎಂದು ಚರ್ಚಿಸುತ್ತಾರೆ” ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

Advertisement

“ಟೆಸ್ಟ್ ಕ್ರಿಕೆಟ್‌ನಲ್ಲೂ ಸಹ, ಅವರು ಬೌಲಿಂಗ್ ಸ್ಥಿರವಾಗಿದ್ದರೂ, ಕಷ್ಟಪಡುತ್ತಿದ್ದಾರೆ. ವಿಶೇಷವಾಗಿ ಏಕದಿನ ಮಾದರಿಯಲ್ಲಿ ಮುಂದುವರಿಯಬೇಕೆಂಬ ಹಂಬಲ ಅವರಲ್ಲಿದೆ. ಮುಂಬರುವ ದಿನಗಳಲ್ಲಿ ಇದು ಕಠಿಣ ಸವಾಲಾಗಲಿದೆ.” ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next