Advertisement

ಗೂಗಲ್ ಬೆನ್ನಲ್ಲೇ ವಾಟ್ಸಾಪ್ ಸರ್ವರ್ ಡೌನ್: ಬಳಕೆದಾರರಿಂದ ದೂರು ಸಲ್ಲಿಕೆ !

04:32 PM Aug 21, 2020 | Mithun PG |

ನವದೆಹಲಿ:  ಜಿಮೇಲ್, ಡಾಕ್ಸ್, ಡ್ರೈವ್ ಸೇರಿದಂತೆ ಗೂಗಲ್ ನ ಹಲವು ಸೇವೆಯಲ್ಲಿ ಗುರುವಾರ (20-8-2020) ಸಮಸ್ಯೆ ಕಂಡುಬಂದಿತ್ತು. ಏತನ್ಮಧ್ಯೆ ಫೇಸ್ ಬುಕ್ ಒಡೆತನದ ವಾಟ್ಸಾಪ್ ನಲ್ಲೂ ವ್ಯತ್ಯಯ ಕಂಡುಬಂದಿದೆ ಎಂದು ವರದಿಯಾಗಿದೆ.

Advertisement

ಜಗತ್ತಿನ ಹಲವೆಡೆ ಗುರುವಾರ ಸಂಜೆಯ ವೇಳೆ ವಾಟ್ಸಾಪ್ ನಲ್ಲಿ ಕನೆಕ್ಷನ್ ಸಮಸ್ಯೆ ಕಂಡುಬಂದಿದ್ದು, ಬಳಕೆದಾರರು ಯಾವುದೇ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.ಈ ಕಾರಣದಿಂದ ಸಹಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ದೂರು ಸಲ್ಲಿಸಿದ್ದಾರೆ.

WABetainfo ವರದಿಯ ಪ್ರಕಾರ, ವಾಟ್ಸಾಪ್ ಸರ್ವರ್ ನಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಏಕಾಏಕಿ ಸೇವೆಗಳು ಸ್ಥಗಿತಗೊಂಡಿದೆ. ಇದರಿಂದ ಹಲವು ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಆದರೇ ಕೆಲವೆಡೆ ಯಾವುದೇ ವ್ಯತ್ಯಯಗಳು ಕಂಡುಬರಲಿಲ್ಲ ಎಂದು ತಿಳಿಸಿದೆ.

ಸರ್ವರ್ ಡೌನ್  ಸಂದರ್ಭದಲ್ಲಿ ಯಾವುದೇ ಹೊಸ ವಾಟ್ಸಾಪ್ ಖಾತೆ ತೆರೆಯಲು ಅಸಾಧ್ಯವಾಗಿತ್ತು. ಈ ಸಮಸ್ಯೆ ಶುಕ್ರವಾರ ಬೆಳಗ್ಗೆಯವರೆಗೂ ಮುಂದುವರೆದಿತ್ತು ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ.

ಡೌನ್ ಡಿಟೇಕ್ಟರ್ ವರದಿ ಪ್ರಕಾರ, ಸುಮಾರು 66% ವಾಟ್ಸಾಪ್ ಬಳಕೆದಾರರು ಕನೆಕ್ಷನ್ ಸಮಸ್ಯೆ ಎದುರಿಸಿದ್ದಾರೆ. 30% ಜನರಿಗೆ ಸಂದೇಶ ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ವ್ಯತ್ಯಯ ಕಂಡು ಬಂದಿದೆ.

Advertisement

ಇದನ್ನೂ ಓದಿ: ಜಿಮೇಲ್ ಸೇವೆಯಲ್ಲಿ ವ್ಯತ್ಯಯ,ಪೇಚಿಗೆ ಸಿಲುಕಿದ ಬಳಕೆದಾರರು: ಗೂಗಲ್ ಸ್ಪಷ್ಟನೆಯೇನು ಗೊತ್ತಾ ?

ಗುರುವಾರ ಬೆಳಗ್ಗೆ ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಡಾಕ್ಸ್, ಗೂಗಲ್ ಮೀಟ್ ಸೇರಿದಂತೆ ಹಲವು ಗೂಗಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳ ಜನರು ಇದರಿಂದ ಸಮಸ್ಯೆ ಎದುರಿಸಿದ್ದರು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ದೂರು ಸಲ್ಲಿಸಿದ್ದರು. ಸಂಜೆ ವೇಳೆಗೆ ಗೂಗಲ್ ಸೇವೆಗಳು ಯಥಾಸ್ಥಿತಿಗೆ ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next