Advertisement

Germany ಬೆನ್ನಲ್ಲೇ ಕೇಜ್ರಿ ಕೇಸಿಗೆ ಮೂಗು ತೂರಿಸಿದ ಅಮೆರಿಕ

11:11 PM Mar 26, 2024 | Team Udayavani |

ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿ ವಾಲ್‌ ಬಂಧನ ವಿಚಾರದಲ್ಲಿ ಮೂಗು ತೂರಿಸಿ ಜರ್ಮನಿಯು ಭಾರತದಿಂದ ತೀವ್ರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಈಗ ಅಮೆರಿಕ ಕೂಡ ಅದೇ ರಾಗವನ್ನು ಹಾಡಿದೆ. ಕೇಜ್ರಿವಾಲ್‌ ಬಂಧನದ ಪರಿಸ್ಥಿತಿ ಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.

Advertisement

ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿ ರುವ ಅಮೆರಿಕದ ವಿದೇಶಾಂಗ ಸಚಿವಾಲಯ ವಕ್ತಾರರು, “ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರಕರಣದಲ್ಲಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಕಾಲಿಕ ಕಾನೂನು ಪ್ರಕ್ರಿಯೆಗಳನ್ನು ಅಮೆರಿಕವು ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದ್ದಾರೆ. ಅಮೆರಿಕದ ಈ ಹೇಳಿಕೆಗೆ ಭಾರತವು ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಜರ್ಮನಿಗೆ ತಿರುಗೇಟು ನೀಡಿದ್ದ ಭಾರತ: ಮೂರ್ನಾಲ್ಕು ದಿನಗಳ ಹಿಂದೆ ಕೇಜ್ರಿವಾಲ್‌ ಬಂಧನ ಕುರಿತು ಜರ್ಮನಿಯ ವಿದೇಶಾಂಗ ಸಚಿವಾಲಯ ಕೂಡ ಇದೇ ರೀತಿಯ ಹೇಳಿಕೆ ನೀಡಿತ್ತು. “ಕೇಜ್ರಿವಾಲ್‌ ಪ್ರಕರಣದಲ್ಲೂ ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೂಲ ತಣ್ತೀಗಳನ್ನು ಅನ್ವಯಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ತಿಳಿಸಿತ್ತು.

ಈ ಹೇಳಿಕೆ ಬೆನ್ನಲ್ಲೇ, ಜರ್ಮನಿ ದೂತಾವಾಸ ಕಚೇರಿಯ ಅಧಿಕಾರಿಯನ್ನು ಕರೆಯಿಸಿಕೊಂಡ ಭಾರತವು ತನ್ನ ವಿರೋಧವನ್ನು ದಾಖಲಿಸಿತ್ತು. ಜರ್ಮನಿಯ ಹೇಳಿಕೆಯು ನಮ್ಮ ಆಂತರಿಕ ವ್ಯವಹಾರದಲ್ಲಿ ಅನಪೇಕ್ಷಿತ ಹಸ್ತಕ್ಷೇಪ ಎಂದು ವಾದಿಸಿತ್ತು.

ಪಿಎಂ ಮನೆ ಮುತ್ತಿಗೆಗೆ ಮುಂದಾದ ಆಪ್‌:
ಕೇಜ್ರಿ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ
ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನವನ್ನು ಖಂಡಿಸಿ ಆಪ್‌ ಕಾರ್ಯರ್ತರು ಮಂಗಳವಾರ ಪ್ರಧಾನಿ ನಿವಾಸಕ್ಕೆ ಘೇರಾವ್‌ ಹಾಕುವ ಪ್ರಯತ್ನ ಮಾಡಿದರೆ, ಮತ್ತೂಂದೆಡೆ ಕೇಜ್ರಿವಾಲ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯ ಪ್ರತಿಭಟನ ರ್ಯಾಲಿ ನಡೆ ಸಿದೆ. ಪೊಲೀಸರು ಎರಡೂ ಪ್ರತಿಭಟನೆಗಳನ್ನು ತಡೆದಿದ್ದಾರೆ. ಮಂಗಳವಾರ ಆಪ್‌ ಕಾರ್ಯಕರ್ತರು ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟರು. ಆದರೆ ಪೊಲೀಸರು ಅವರನ್ನು ಪಟೇಲ್‌ ಚೌಕ್‌ನಲ್ಲೇ ತಡೆದು, ಆಪ್‌ ನಾಯಕರು, ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದುಕೊಂಡರು. ದಿಲ್ಲಿ ಆಪ್‌ ಘಟಕ ಸಂಚಾಲಕ ಗೋಪಾಲ್‌ ರಾಯ್‌ ಮಾತನಾಡಿ, “ಪೊಲೀಸರು ದಿಲ್ಲಿಯನ್ನು ಪೊಲೀಸ್‌ ರಾಜ್ಯವನ್ನಾಗಿ ಮಾಡಿದ್ದಾರೆ’ ಎಂದು ಆರೋಪಿಸಿದರು. ಮುಂಜಾಗ್ರತೆ ಕ್ರಮವಾಗಿ ದಿಲ್ಲಿಯ ಅನೇಕ ಕಡೆ ನಿಷೇಧಾಜ್ಞೆ ಹೊರಡಿಸಲಾಗಿತ್ತು.

Advertisement

ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ
ಬಿಜೆಪಿ ಕೂಡ ಜೈಲಿನಲ್ಲಿರುವ ಕೇಜ್ರಿವಾಲ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು. ಮಂಗಳವಾರ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ದಿಲ್ಲಿ ಸಚಿವಾಲಯದತ್ತ ಪ್ರತಿಭಟನೆ ಮೆರೆವಣಿಗೆ ಹೊರಟರು. ಬಹದ್ದೂರ್‌ ಶಾ ಜಾಫ‌ರ್‌ ಮಾರ್ಗಕ್ಕೆ ಬರುತ್ತಿದ್ದಂತೆ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಸೇರಿ 57 ಬಿಜೆಪಿ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.

ಕೇಜ್ರಿ 2ನೇ ಆದೇಶ
ಜೈಲಿನಿಂದಲೇ ಕೇಜ್ರಿವಾಲ್‌ ಮಂಗಳವಾರ ಮತ್ತೂಂದು ಆದೇಶ ಹೊರಡಿಸಿದ್ದಾರೆಂದು ದಿಲ್ಲಿ ಸಚಿವ ಸೌರಭ್‌ ಭಾರ ದ್ವಾಜ್‌ ತಿಳಿಸಿದ್ದಾರೆ. ದಿಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಅಗತ್ಯ ಔಷಧಗಳು ಮತ್ತು ಪರೀಕ್ಷೆಗಳು ಲಭ್ಯವಾಗಿರುವಂತೆ ಅಧಿಕಾರಿಗಳಿಗೆ ತಮ್ಮ ಆದೇಶದ ಮೂಲಕ ಸೂಚಿಸಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಉಚಿತ ಸೇವೆ ರದ್ದಾಗದು
ಜನಪರ ಕಲ್ಯಾಣ ಕಾರ್ಯಕ್ರಮಗಳು ಮತ್ತು ಉಚಿತ ಸೇವೆಗಳು ರದ್ದಾಗಲಿವೆ ಎಂಬ ವದಂತಿಯನ್ನು ನಂಬಬೇಡಿ ಎಂದು ದಿಲ್ಲಿ ಸರಕಾರ ಸ್ಪಷ್ಟಪಡಿಸಿದೆ. ಸಿಎಂ ಕೇಜ್ರಿವಾಲ್‌ ಬಂಧನದ ಹಿನ್ನೆಲೆಯಲ್ಲಿ ಕೆಲವರು ತಪ್ಪು ಮಾಹಿತಿಯನ್ನು ಪಸರಿಸುತ್ತಿದ್ದಾರೆ. ಆದರೆ ಇದಾವುದೂ ನಿಜವಲ್ಲ. ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತವು ಯಾವುದೇ ನಿರ್ದಿಷ್ಟ ವ್ಯಕ್ತಿಯ ಸಂಬಂಧಿಸಿದ್ದರಾಗಿರು ವುದಿಲ್ಲ ಮತ್ತು ಅವು ಮುಂದುವರಿಯುತ್ತವೆ ಎಂದು ದಿಲ್ಲಿ ಯೋಜನಾ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next