Advertisement

“ಫ್ಲೆಕ್ಸಿ ಫೇರ್‌ ಸ್ಕೀಮ್‌’ಪರಿಷ್ಕರಣೆ; ದರ ಇಳಿಯುವ ಸಾಧ್ಯತೆ

08:00 AM Sep 29, 2017 | Team Udayavani |

ಹೊಸದಿಲ್ಲಿ: ಫ್ಲೆಕ್ಸಿ ಫೇರ್‌ ಟಿಕೆಟ್‌ ವ್ಯವಸ್ಥೆಯಿಂದಾಗಿ ರೈಲು ಟಿಕೆಟ್‌ ದರ ಹೆಚ್ಚಳವಾಗಿದೆ ಎಂದು ಪ್ರಯಾಣಿಕರು ಆರೋಪಿ ಸುತ್ತಿರುವ ಹಿನ್ನೆಲೆಯಲ್ಲಿ, ದರವನ್ನು ಪರಿಷ್ಕರಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಹೀಗಾಗಿ, ಸದ್ಯದಲ್ಲೇ ದರ ಇಳಿಕೆಯಾಗಲಿದೆ ಎಂದು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

Advertisement

ಸುಲಭಸಾಧ್ಯ ಟಿಕೆಟ್‌ ದರ ಯೋಜನೆ (ಫ್ಲೆಕ್ಸಿ ಫೇರ್‌ ಸ್ಕೀಮ್‌)ಯಿಂದಾಗಿ ಒಂದು ವರ್ಷದ ಅವಧಿಯಲ್ಲಿ ರೈಲ್ವೇ ಇಲಾಖೆ ಹೆಚ್ಚುವರಿ 540 ಕೋಟಿ ರೂ. ಆದಾಯ ಗಳಿಸಿದೆ ಎಂದು ಗೋಯಲ್‌ ಮಾಹಿತಿ ನೀಡಿದ್ದಾರೆ. ಫ್ಲೆಕ್ಸಿ ಫೇರ್‌ ಸ್ಕೀಮ್‌ ಅನ್ನು ಕಳೆದ ಸೆ.9ರಂದು ಜಾರಿಗೆ ತರಲಾಗಿದ್ದು, ಇದು ರಾಜಧಾನಿ, ಶತಾಬ್ದಿ ಹಾಗೂ ತುರಂತೋ ರೈಲುಗಳಲ್ಲಿ ಪ್ರಯಾಣ ಬೆಳೆಸುವವರಿಗೆ ಅನ್ವಯಿಸುತ್ತಿದೆ. 

ಈ ಯೋಜನೆಯಂತೆ ರೈಲಿನ ಶೇ. 10%ರಷ್ಟು ಸೀಟುಗಳನ್ನು ಸಾಮಾನ್ಯ ಟಿಕೆಟ್‌ ದರದಲ್ಲೇ ನೀಡಲು ಅವಕಾಶ ನೀಡಲಾಗುತ್ತದೆ. ಅನಂತರ ಸೀಟುಗಳ ಟಿಕೆಟ್‌ ದರವನ್ನು ಹಂತ ಹಂತವಾಗಿ ಪ್ರತಿ ಶೇ. 10%ಗೆ ಶೇ. 10%ರಂತೆ ಹೆಚ್ಚಳ ಮಾಡಲಾಗುತ್ತದೆ. ಈ ಮೂಲಕ ಶೇ. 50%ನಷ್ಟು ಮಾರಾಟ ಮಾಡಲಾಗುತ್ತದೆ. ರೈಲ್ವೇ ಅಂಕಿ-ಅಂಶಗಳ ಪ್ರಕಾರ 2016 ಸೆಪ್ಟಂಬರ್‌ನಿಂದ 2017, ಜೂನ್‌ ಅವಧಿಯಲ್ಲಿ ಆದಾಯ 540 ಕೋಟಿ ರೂ.ನಷ್ಟು ಹೆಚ್ಚಿದೆ.
ಜನರ ಜೇಬಿಗೆ ಕತ್ತರಿಯನ್ನೂ ಹಾಕದೇ, ಜನರಿಗೆ ಕಿರಿಕಿರಿಯನ್ನೂ ಮಾಡದೇ ಫ್ಲೆಕ್ಸಿ ಫೇರ್‌ ಯೋಜನೆ ಯನ್ನು ಇನ್ನಷ್ಟು ವಿಸ್ತರಿಸಿ, ಜನಸ್ನೇಹಿ ಆಗಿಸಬಹುದಾಗಿದೆ. ಇದರಲ್ಲಿ ಆದಾಯವೂ ಒಂದು ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ ಗೋಯಲ್‌. 

ರೈಲ್ವೇಯಲ್ಲೂ ಸಮರ್ಥ ಹಾಗೂ ವೇಗವಾದ ಸೇವೆ ಒದಗಿಸಲು ಸಾಧ್ಯವಿದೆ. ಇನ್ನೂ 700 ರೈಲುಗಳ ವೇಗವನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ನೀಡಲಾಗಿದ್ದು, ನವೆಂಬರ್‌ 1ರಿಂದ ಜಾರಿಗೆ ಬರಲಿದೆ.
– ಪಿಯೂಷ್‌ ಗೋಯಲ್‌, 
ಕೇಂದ್ರ ರೈಲ್ವೇ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next