ನವದೆಹಲಿ: ಪೂರ್ವ ಲಡಾಖ್ ನಲ್ಲಿ ಕಳೆದ ವರ್ಷ ಗಾಲ್ವಾನ್ ಕಣಿವೆ ಪ್ರದೇಶ ಮತ್ತು ವಾಸ್ತವ ನಿಯಂತ್ರಣ ರೇಖೆ ಸೇರಿದಂತೆ ಇತರ ಸ್ಥಳಗಳಲ್ಲಿ ಭಾರತದ ಸೇನೆ ಜತೆ ಮುಖಾಮುಖಿಯಾದ ನಂತರ ಚೀನಾ ಸೇನೆ ಇನ್ನಷ್ಟು ಉತ್ತಮ ತರಬೇತಿ ಮತ್ತು ಸಿದ್ಧತೆಯ ಅಗತ್ಯ ಇದೆ ಎಂಬುದು ಮನವರಿಕೆಯಾಗಿದೆ ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!
ಎಎನ್ ಐ ಜತೆ ಮಾತನಾಡಿದ ಅವರು, ಚೀನಾ ಸೈನಿಕರು ಮುಖ್ಯವಾಗಿ ಅಲ್ಪವಧಿಯನ್ನು ಪರಿಗಣಿಸಿ ಘರ್ಷಣೆಗೆ ಇಳಿದಿದ್ದರು.
ಅಲ್ಲದೇ ಚೀನಾ ಸೇನೆ ಹಿಮಾಲಯ ಪರ್ವತ ಭೂ ಪ್ರದೇಶದಲ್ಲಿ ಹೋರಾಡುವಷ್ಟು ನೈಪುಣ್ಯತೆ ಹೊಂದಿಲ್ಲ ಎಂದು ಹೇಳಿದರು.
ಭಾರತದ ಗಡಿಯಲ್ಲಿ ಚೀನಾ ಸೇನೆ ನಿಯೋಜನೆಯಲ್ಲಿ ಬದಲಾವಣೆಯಾಗಿದೆ. ಅದರಲ್ಲೂ ವಿಶೇಷವಾಗಿ 2020ರ ಮೇ ಮತ್ತು ಜೂನ್ ತಿಂಗಳಲ್ಲಿ ಗಾಲ್ವಾನ್ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಘಟನೆಗಳ ನಂತರ ಈ ಬದಲಾವಣೆ ನಡೆದಿರುವುದಾಗಿ ತಿಳಿಸಿದರು.
ಗಾಲ್ವಾನ್ ಘಟನೆ ನಂತರ ಚೀನಾ ಸೇನೆ ತಾವು ಇನ್ನಷ್ಟು ಉತ್ತಮ ತರಬೇತಿ ಮತ್ತು ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಅರಿತುಕೊಂಡಿರುವುದಾಗಿ ಹೇಳಿದರು. ವಾಸ್ತವ ನಿಯಂತ್ರಣ ರೇಖೆ ಸಮೀಪ ಚೀನಾ ಸೇನೆ ಮತ್ತೆ ಹೊಸ ಚಟುವಟಿಕೆಯಲ್ಲಿ ತೊಡಗಿಕೊಂಡಿದೆಯಲ್ಲ ಎಂಬ ಪ್ರಶ್ನೆಗೆ ರಾವತ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.