Advertisement
2007-08ರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಅಂದು ಸರ್ಕಾರ ‘ಆಸರೆ ಗ್ರಾಮ’ವೆಂಬ ನಾಮಕರಣದೊಂದಿಗೆ ಹೊಸ ಗ್ರಾಮ ನಿರ್ಮಿಸಿಕೊಟ್ಟಿತು. ಅಮರಗೋಳ ಗ್ರಾಮದವರಿಗೆ 415 ಮನೆ, ಬಸರಕೋಡ-234, ಬಿ.ಎಸ್. ಬೇಲೆರಿ-389, ಹೊಳೆಆಲೂರ-473, ಹೊಳೆ ಮಣ್ಣೂರ-554, ಮಾಳವಾಡ-605, ಮೆಣಸಗಿ-1102, ಗಾಡ ಗೋಳಿ-504, ಯಾ.ಸ. ಹಡಗಲಿ-593, ಹೊಳೆಹಡಗಲಿ- 305, ಕುರವಿನಕೊಪ್ಪ-121 ಸೇರಿ ಒಟ್ಟು 5295 ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಹೊಳೆಆಲೂರಿನಲ್ಲಿ 2300 ಕುಟುಂಬ, ಬಸರಕೋಡ-300, ಬಿ.ಎಸ್. ಬೇಲೆರಿ-400, ಅಮರಗೋಳ- 450, ಬಸರಕೋಡ-350, ಮೇಣಸಗಿ-1250, ಹೊಳೆಹಡಗಲಿ- 385, ಕುರವಿನಕೊಪ್ಪ-150, ಗಾಡಗೋಳಿ-350, ಯಾ.ಸ.ಹಡಗಲಿ-650, ಹೊಳೆಮಣ್ಣೂರ- 664, ಮಾಳವಾಡ-710 ಕುಟುಂಬಗಳಿವೆ. ಗ್ರಾಮಗಳಲ್ಲಿ ಇರುವ ಕುಟುಂಬಗಳ ಸಂಖ್ಯೆ ಹತ್ತು ವರ್ಷದಲ್ಲಿ ಅಧಿಕವಾಗಿದ್ದು, ಸರ್ಕಾರ ನೀಡಿರುವ ಮನೆಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಸಂತ್ರಸ್ತರಿಗೆ ಇಲ್ಲಿ ಇರಲು ಜಾಗವಿಲ್ಲ. ಅಲ್ಲಿ ಇರಲು ಪ್ರವಾಹ ಮತ್ತು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಎಲ್ಲಿರಬೇಕು ಎಂಬ ಚಿಂತೆಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಇದರಿಂದ ನಿರಾಶ್ರೀತರಿಗೆ ಹೊಸ ಗ್ರಾಮದಲ್ಲಿದ್ದರು ನೋವೆ, ಹಳೆ ಗ್ರಾಮಕ್ಕೆ ಹೋದರು ನೋವೆ. ಇದರಿಂದಾಗಿ ಸಂತ್ರಸ್ತರ ಬದುಕು ನುಂಗಲಾದರ ಬಿಸಿ ತುಪ್ಪವಾಗಿದೆ.
ನೆರೆ ಪರಿಹಾರದಲ್ಲಿ ಕರ್ತವ್ಯ ಲೋಪ-ಅಧಿಕಾರಿ ಅಮಾನತು: ನೆರೆ ಪರಿಹಾರ ಕರ್ತವ್ಯದಲ್ಲಿ ಲೋಪವೆಸಗಿದ ರೊಣ ತಾಲೂಕಿನ ಹೊಳೆ ಮಣ್ಣೂರಿನ ಪಿಡಿಒ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
Related Articles
Advertisement
•ಯಚ್ಚರಗೌಡ ಗೋವಿಂದಗೌಡ್ರ