Advertisement

ಕರ್ನಾಟಕದಲ್ಲಿ ಅಳುಮುಂಜಿ ಸರ್ಕಾರ

11:30 PM Mar 24, 2019 | Team Udayavani |

ಬೆಳಗಾವಿ: ದೇಶದ ಮಹಾ ಘಟಬಂಧನ್‌ದಲ್ಲಿರುವ ಕರ್ನಾಟಕದ ನಾಯಕರೊಬ್ಬರು ಕಣ್ಣೀರು ಹಾಕುತ್ತಿದ್ದಾರೆ. ಇಲ್ಲಿ ಅಳುಮುಂಜಿ ಸರ್ಕಾರ ಇದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಹರ್ಷವರ್ಧನ್‌ ಜೆಎಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದೆ ಕುಟುಕಿದರು.

Advertisement

ಭಾನುವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ನವದೆಹಲಿ ಘಟಕದ ಅಧ್ಯಕ್ಷನಾಗಿ ಆಗಿನ ಸಿಎಂ ಯಡಿಯೂರಪ್ಪ ಅವರನ್ನು ಸ್ವಾಗತಿಸಿದ್ದೆ. ಈಗ ಮತ್ತೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next