ಅಜ್ಜಾವರ ಎ. 26: ಭೂಮಿಯ ತಾಪಮಾನ ದಿನೆ ದಿನೇ ಏರುತಿದ್ದು, ತೊಟ್ಟು ನೀರಿಗೂ ಪರಿತಪಿಸುವಂತ ಕಾಲ ಸನ್ನಿಹಿತವಾಗಿದೆ. ಗ್ರಾಮದ ಹೆಚ್ಚಿನ ಭಾಗಗಳಲ್ಲಿ ಬಾವಿಯ ನೀರು ಸಂಪೂರ್ಣ ಖಾಲಿಯಾಗಿ ಬರಡಾಗಿದೆ. ನೀರಿಲ್ಲದೆ ಕಂಗಾಲಗಿದ್ದ ಅಜ್ಜಾವರದ 12 ಕುಟುಂಬಗಳಿಗೆ ಕೊನೆಗೂ ನಳ್ಳಿ ನೀರು ಸಂಪರ್ಕ ದೊರಕಿದೆ.
ಅಜ್ಜಾವರ ಗ್ರಾಮ ವ್ಯಾಪ್ತಿಯ ಪಡ್ಡಂಬೈಲು, ನಾಂಗುಳಿ ಹಾಗೂ ಕರ್ಲಪ್ಪಾಡಿಯ 12 ಮನೆಗಳಿಗೆ ಪಂಚಾಯತ್ ವತಿಯಿಂದ ನಳ್ಳಿನೀರು ಸಂಪರ್ಕ ಲಭಿಸಿರಲಿಲ್ಲ. ಈ ಭಾಗದ ಜನರಿಗೆ ಕುಡಿಯಲು ನೀರಿಲ್ಲದೆ ದಿಕ್ಕೇ ದೋಚದಂತಾಗಿತ್ತು. ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
2012-13ರಲ್ಲಿ ಜನರಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಉದ್ದೇಶದಿಂದ ಗ್ರಾ.ಪಂ. ಕಡೆಯಿಂದ ಟ್ಯಾಂಕ್ ಒಂದನ್ನು ನಿರ್ಮಿಸಲಾಗಿತ್ತು. ಒಂದೆರಡು ತಿಂಗಳು ನೀರು ಪೂರೈಕೆಯಾಗಿದ್ದರೂ, ವ್ಯವಸ್ಥಿತ ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿತ್ತು. ಕಳೆದ ಎಂಟು ವರ್ಷಗಳಿಂದ ಇದೇ ಸ್ಥಿತಿ ಮುಂದುವರೆದಿದ್ದು, ಈ ಭಾಗದ ನಿವಾಸಿಗಳು ತಮ್ಮ ಅಗತ್ಯತೆಗಳಿಗೆ ಪಕ್ಕದ ಮನೆಯವರಿಂದ ನೀರು ಪಡೆಯುತ್ತಿದ್ದರು.
Advertisement
ಟ್ಯಾಂಕಿದ್ದರೂ ನೀರಿಲ್ಲ
ತತ್‌ಕ್ಷಣ ಸೂಚಿಸಿದ್ದೆಅಜ್ಜಾವರ ಪಡ್ಡಂಬೈಲು ನಿವಾಸಿಗಳಿಗೆ ನೀರಿನ ಅಭಾವವಿದೆ ಎಂದು ನನ್ನ ಗಮನಕ್ಕೆ ಬಂದ ತತ್‌ಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ. – ಅಹಮ್ಮದ್ ಕುಂಞಿ ಸುಳ್ಯ ತಹಶೀಲ್ದಾರ್
ಕರ್ತವ್ಯ ಪ್ರಜ್ಞೆ8 ವರ್ಷಗಳಿಂದ ನಮಗೆ ನಳ್ಳಿ ನೀರಿನ ವ್ಯವಸ್ಥೆಯಿರಲಿಲ್ಲ. ನಮ್ಮ ಮನವಿಗೆ ತಹಶೀಲ್ದಾರರು ಸ್ಪಂದಿಸಿ ನಳ್ಳಿ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ. ಅವರ ಕರ್ತವ್ಯಪ್ರಜ್ಞೆಯಿಂದ ನೀರು ಲಭಿಸುವಂತಾಯಿತು. – ಸದಾನಂದ, ಸ್ಥಳೀಯರು
ಶಿವಪ್ರಸಾದ್ ಮಣಿಯೂರು