Advertisement
ಅ.10ರಿಂದ 20ರವರೆಗೆ ದಸರಾ ರಜೆ ಇರಲಿದೆ. ಈಗಾಗಲೇ ಸರ್ಕಾರ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಿದೆ. ಆದರೆ, ಬಿಸಿಯೂಟ ಆರಂಭ ಮಾಡಿಲ್ಲ. ಹೀಗಾಗಿ ದಸರಾ ರಜೆ ಮುಗಿಯುತ್ತಿದ್ದಂತೆ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟ ವನ್ನು ಶಾಲೆಯಲ್ಲೇ ನೀಡಲಿದೆ.
ಬಿಸಿಯೂಟದ ಬದಲಿಗೆ ಆಹಾರ ಧಾನ್ಯವನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಈಗ ಕೊರೊನಾ ಪ್ರಕರಣ ಕಡಿಮೆಯಾಗುವ ಜತೆಗೆ 3ನೇ ಅಲೆಯ ಆತಂಕವೂ ಕ್ಷೀಣಿಸಿರುವುದರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭದ ಜತೆ ಜತೆಗೆ ಬಿಸಿಯೂಟ ನೀಡಲು ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಗಳಿಗೆ ಸೂಚನೆ: ದಸರಾ ರಜೆ ಮುಗಿದ ತಕ್ಷಣದಿಂದ ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭವಾಗುವ ಜತೆಗೆ ಬಿಸಿಯೂಟವೂ ನೀಡಬೇಕಾಗಿದೆ. ಹೀಗಾಗಿ ಕೊರೊನಾ ತಡೆ ಸಂಬಂಧಿಸಿದಂತೆ ಈಗಾಗಲೇ ನೀಡಿರುವ ಎಸ್ ಒಪಿಯನ್ನು ಅತ್ಯಂತ ವ್ಯವಸ್ಥಿತವಾಗಿ ಪಾಲಿಸಿಕೊಂಡು, ಬಿಸಿ ಯೂಟ ನೀಡಬೇಕಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಈಗಿಂದಲೇ ಆರಂಭಿಸಿಕೊಳ್ಳಬೇಕು. ಬಿಸಿಯೂಟ ಸಿದ್ಧಪಡಿಸಿರುವ ಕೊಠಡಿಯ ಸ್ವಚ್ಛತೆ, ಬಿಸಿಯೂಟ ವಿತರಣೆಗೆ ಬೇಕಾದ ವ್ಯವಸ್ಥೆ ಸೇರಿ ದಂತೆ ಎಲ್ಲವನ್ನೂ ಸಮರ್ಪಕ ರೀತಿಯಲ್ಲಿ ಸಿದ್ಧಪಡಿಸಿ ಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.
Related Articles
Advertisement