ದೆಹಲಿಯ ಸ್ಟೇಡಿಯಂನಲ್ಲಿ ತಮ್ಮ ನಾಯಿಯನ್ನು ವಾಕಿಂಗ್ ಕರೆದೊಯ್ಯಲೆಂದು ಐಎಎಸ್ ದಂಪತಿ ಅಲ್ಲಿನ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆ ಮಾಡುತ್ತಿದ್ದರು ಎಂಬ ಸುದ್ದಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಸರ್ಕಾರ, ಆ ದಂಪತಿಯನ್ನು ಎತ್ತಂಗಡಿ ಮಾಡಿದೆ. ಪತಿ ಸಂಜೀವ್ ಖೀರ್ವಾರ್‌ರನ್ನು ಲಡಾಖ್‌ಗೂ, ಪತ್ನಿ ಅನು ದುಗ್ಗಾರನ್ನೂ ಅರುಣಾಚಲಕ್ಕೂ ವರ್ಗಾವಣೆ ಮಾಡಲಾಗಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಒಂದು ಪ್ರಶ್ನೆ ನೆಟ್ಟಿಗರ ತಲೆತಿನ್ನತೊಡಗಿದೆ. “ಈಗ ನಾಯಿ ಎಲ್ಲಿಗೆ ಹೋಗುತ್ತದೆ?’ ಎನ್ನುವುದೇ ಆ ಪ್ರಶ್ನೆ. ನಾಯಿ ಲಡಾಖ್‌ಗೆ ಹೋಗುತ್ತೋ, ಅರುಣಾಚಲಕ್ಕೆ ಹೋಗುತ್ತೋ ಎಂಬ ಬಗ್ಗೆ ಶುಕ್ರವಾರ ಇಡೀ ದಿನ ಟ್ವಿಟರ್‌ನಲ್ಲಿ ಚರ್ಚೆ ನಡೆದಿದೆ. ಅಷ್ಟೇ ಅಲ್ಲ,
Where Will The Dog Go’ ‘ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಕೂಡ ಆಗಿದೆ. ಕೆಲವರಂತೂ, “ಲಡಾಖ್‌ನಲ್ಲಿ ಚಳಿ ಹೆಚ್ಚಿರುತ್ತದೆ. ಹಾಗಾಗಿ ಅರುಣಾಚಲಕ್ಕೆ ಹೋಗುವುದೇ ಸೂಕ್ತ’ ಎಂಬ ಸಲಹೆಯನ್ನೂ ನೀಡಿದ್ದಾರೆ.