Advertisement

ಎಂಬಿಬಿಎಸ್‌ ಕಲಿಯಲಿದ್ದಾರೆ ತಂದೆ-ಮಗಳು; ಜಾಲತಾಣಗಳಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆ

12:42 AM Feb 05, 2022 | Team Udayavani |

ಕೊಚ್ಚಿ: ಇದೊಂದು ತಂದೆ ಮತ್ತು ಮಗಳ ನಡುವಿನ ಅನ್ಯೋನ್ಯತೆ ಮತ್ತು ಸಾಧನೆಯ ಕಥೆ. 2021ರ ನೀಟ್‌ ಬರೆದು ತಂದೆ ಮತ್ತು ಮಗಳು ಎಂಬಿಬಿಎಸ್‌ ಸೀಟು ಪಡೆದುಕೊಂಡಿದ್ದಾರೆ.

Advertisement

ಹೀಗಾಗಿ, ಅವರಿಬ್ಬರು ಬಲು ಅಪರೂಪದ ಸಾಧನೆ ಮಾಡಿದ್ದಾರೆ. ಕೊಚ್ಚಿಯಲ್ಲಿರುವ ಭಾರತ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ನ‌ಲ್ಲಿ ಎಂಜಿನಿಯರ್‌ ಆಗಿರುವ ಲೆ.ಕ.ಮುರುಗಯ್ಯನ್‌ (56) ಮತ್ತು ಅವರ ಪುತ್ರಿ ಶೀತಲ್‌ (18) ಇಂಥ ಸಾಧನೆ ಮಾಡಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಂದೆ ಚೆನ್ನೈನ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಪಡೆದಿದ್ದರೆ, ಪುತ್ರಿ ಪುದುಚ್ಚೇರಿಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಅವರ ಈ ಸಾಧನೆಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಎಂಜಿನಿಯರಿಂಗ್‌ ಪದವೀಧರರಾದರೂ ಮುರುಗಯ್ಯನ್‌ ವೈದ್ಯರಾಗುವ ಕನಸು ಹೊಂದಿದ್ದರು. ಕುಟುಂಬದ ಸದಸ್ಯರ ಒತ್ತಡ ಹಿನ್ನೆಲೆಯಲ್ಲಿ ಅವರು ಎಂಜಿನಿಯರಿಂಗ್‌ ಸೇರಿದ್ದರು.

ಇದನ್ನೂ ಓದಿ:ನರೇಗಾ ಯೋಜನೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ : ಸಚಿವ ಈಶ್ವರಪ್ಪ

Advertisement

ಹೀಗಾಗಿ, ವೈದ್ಯರಾಗುವ ಉತ್ಸಾಹ ಕುಂದಿರಲಿಲ್ಲ. ಉದ್ಯೋಗದಲ್ಲಿರುವ ಮುರುಗಯ್ಯನ್‌ ಅವರಿಗೆ ನೀಟ್‌ ಪಾಸಾಗುವ ಕೆಲಸ ಸುಲಭವಾಗಿರಲಿಲ್ಲ. ಹಠ ಬಿಡದ ಮುರುಗಯ್ಯನ್‌ ಕೆಲಸದ ಮತ್ತು ಪರೀಕ್ಷೆ ತಯಾರಿಯ ನಡುವೆ ಸಮನ್ವಯತೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬದ ಸದಸ್ಯರು ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು ಎಂದು ಅವರು ಹರ್ಷ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next