Advertisement

ಬ್ಲೂವೇಲ್‌ ಬಳಿಕ ಮೊಮೊ

08:20 AM Aug 08, 2018 | Karthik A |

ಆರ್ಜೆಂಟೀನಾ: ‘ಬ್ಲೂವೇಲ್‌ ಚಾಲೆಂಜ್‌’ ಆನ್‌ ಲೈನ್‌ ಗೇಮ್‌ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಈ ಅಪಾಯಕಾರಿ ಆಟಕ್ಕೆ ಇಡೀ ವಿಶ್ವವೇ ತತ್ತರಿಸಿಹೋಗಿತ್ತು. ಮೊನ್ನೆ ಮೊನ್ನೆಯಷ್ಟೇ ಕೀಕಿ ಡಾನ್ಸ್‌ ಕೂಡ ಇದೇ ರೀತಿಯ ಆತಂಕ ಸೃಷ್ಟಿಸಿತ್ತು. ಇವೆಲ್ಲದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಇಂಥ ಗೇಮ್‌ ಗಳಿಗೆ ಬಲಿಯಾಗುವವರ ಸಂಖ್ಯೆ ನಿಂತಿಲ್ಲ. ಈ ಬೆನ್ನಿಗೇ ಇದೀಗ ಇಂಥದ್ದೇ  ಮತ್ತೂಂದು ಪ್ರಳಯಾಂತಕ ಆನ್‌ ಲೈನ್‌ ಗೇಮ್‌ ‘ಮೊಮೊ’ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇದೂ ಬ್ಲೂವೇಲ್‌ ರೀತಿ ಸವಾಲೊಡ್ಡುವ ಆಟವಾಗಿದೆ.

Advertisement

ಲ್ಯಾಟಿನ್‌ ಅಮೆರಿಕದಲ್ಲಿ ‘ಮೊಮೊ’ ಸವಾಲಿಗೆ 12ರ ಬಾಲಕಿ ಬಲಿಯಾದ ಘಟನೆಯ ಬೆನ್ನಲ್ಲೇ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಪೊಲೀಸರು ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಭಾರತಕ್ಕೆ ಕಾಲಿಟ್ಟ ಉದಾಹರಣೆಗಳೇನು ವರದಿಯಾಗಿಲ್ಲ. ಆದರೆ ಸಾಮಾಜಿಕ ಜಾಲತಾಣ ಮುಕ್ತವಾಗಿರುವ ಕಾರಣ ಇಂಥ ಸವಾಲು ಫೇಸ್‌ ಬುಕ್‌, ಟ್ವಿಟರ್‌ ನಂಥ ಮಾಧ್ಯಮದ ಮೂಲಕ ಎದುರಾಗಿದ್ದರೆ ಅಚ್ಚರಿಯಿಲ್ಲ.

ಏನಿದು ಮೊಮೊ? ಬ್ಲೂವೇಲ್‌ ಗ‌ೂ ಇದಕ್ಕೂ ಬಹಳ ವ್ಯತ್ಯಾಸವೇನೂ ಇಲ್ಲ. ಆದರೆ ಮೊಮೊಗೆ ವೇದಿಕೆಯಾಗಿದ್ದು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌. ಬ್ಲೂವೇಲ್‌ ರೀತಿಯಲ್ಲೇ ಮೊಮೊದಲ್ಲಿಯೂ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗುವಂತೆ ಸವಾಲೊಡ್ಡಲಾಗುತ್ತದೆ. ಇದಕ್ಕೂ ಮೊದಲು ಸ್ಪರ್ಧಿ ಬೇರೆ ಬೇರೆ ಹಂತದಲ್ಲಿ ಪ್ರತಿಯೊಂದು ಸವಾಲುಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವಂತೆ ಮನಸ್ಥಿತಿಯನ್ನೇ ಬದಲಾಯಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next