ಒಡಿಶಾ: ತೀರಾ ಬಡಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬವೊಂದರ ಮಹಿಳೆಯೊಬ್ಬರು ತನಗೆ ಹುಟ್ಟಿದ ಎರಡನೇ ಮಗುವೂ ಹೆಣ್ಣಾಗಿದ್ದರಿಂದ ಬೇಸರಗೊಂಡ ಮಹಿಳೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ತನ್ನ 8 ತಿಂಗಳ ಹೆಣ್ಣು ಮಗುವನ್ನು 800 ರೂಪಾಯಿಗೆ ಮಾರಾಟ ಮಾಡಿರುವ ವಿಲಕ್ಷಣ ಘಟನೆಯೊಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಘಟನೆ ವಿವರ : ತೀರಾ ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ಮಹಿಳೆ ಕರಾಮಿ ಅವರಿಗೆ ಮೊದಲ ಮಗು ಹೆಣ್ಣಾಗಿದ್ದು ಇನ್ನೊಂದು ಗಂಡು ಮಗು ಹುಟ್ಟಿದರೆ ಮುಂದೆ ಜೀವನ ನಡೆಸಲು ಸಹಕಾರಿಯಾಗಬಲ್ಲದು ಎಂದು ತಾಯಿ ಎನಿಸಿಕೊಂಡಿದ್ದಳು ಅದರಂತೆ ಎರಡನೇ ಮಗುವಿನ ಜನನವಾಗಿದೆ ಆದರೆ ಎರಡನೇ ಮಗುವೂ ಹೆಣ್ಣು ಆಗಿದ್ದರಿಂದ ಬೇಸರಗೊಂಡ ತಾಯಿ ಮುಂದೆ ಜೀವನ ನಡೆಸುವುದು ಕಷ್ಟವಾಗಬಹುದು ಎಂದು ಎನಿಸಿಕೊಂಡಿದ್ದಾಳೆ ಗಂಡ ತಮಿಳುನಾಡಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತಿದ್ದರು ಎನ್ನಲಾಗಿದೆ ಇತ್ತ ಎರಡನೇ ಮಗು ಹೆಣ್ಣಾಗಿರುವ ಕಾರಣ ಪಕ್ಕದ ಮನೆಯವರೊಂದಿಗೆ ತಾಯಿ ತನ್ನ ಕಷ್ಟಗಳನ್ನು ತೋಡಿಕೊಂಡಿದ್ದರು ಎನ್ನಲಾಗಿದೆ ಆದರೆ ಯಾರಿಗೂ ಮಾರಾಟ ಮಾಡುವ ನಿರ್ಧಾರದ ಬಗ್ಗೆ ಹೇಳಿರಲಿಲ್ಲ ಅದೊಂದುದಿನ ಮಗುವಿಗೆ ಎಂಟು ತಿಂಗಳು ತುಂಬಿದೆ ಈ ವೇಳೆ ಯಾರೋ ಒಬ್ಬರು ಮಧ್ಯವರ್ತಿಯ ಸಹಾಯದಿಂದ ತನ್ನ ಎಂಟು ತಿಂಗಳ ಮಗುವನ್ನು ಕೇವಲ 800 ರೂಪಾಯಿಗೆ ಮಾರಾಟ ಮಾಡಿದ್ದಾಳೆ, ಆದರೆ ಈ ವಿಚಾರವನ್ನು ತನ್ನ ಗಂಡನಿಗೆ ಹೇಳದೆ ಮುಚ್ಚಿಟ್ಟಿದ್ದಾಳೆ.
ಕೆಲ ದಿನ ಬಿಟ್ಟು ಮನೆಗೆ ಬಂದ ಪತಿಗೆ ತನ್ನ ಎರಡನೇ ಮಗು ಕಣ್ಣಿಗೆ ಕಾಣಲಿಲ್ಲ ಹಾಗಾಗಿ ಪತ್ನಿ ಬಳಿ ಮಗು ಎಲ್ಲಿ ಎಂದು ಕೇಳಿದ್ದಾನೆ ಅದಕ್ಕೆ ಪತ್ನಿ ಅರೋಗ್ಯ ಸಮಸ್ಯೆಯಿಂದ ಮಗು ಸಾವನ್ನಪ್ಪಿರುವುದಾಗಿ ಹೇಳಿದ್ದಾಳೆ, ವಿಷಯ ಕೇಳುತ್ತಲೇ ಆಘಾತಕ್ಕೆ ಒಳಗಾದ ಪತಿ ತಮ್ಮ ನೆರೆಹೊರೆಯವರಲ್ಲಿ ವಿಚಾರ ಹೇಳಿದ್ದಾನೆ ಅವಾಗ ನಿಜಾಂಶ ಹೊರಬಿದ್ದಿದೆ ಇದರಿಂದ ಕುಪಿತಗೊಂಡ ಪತಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ ತಾನು ತನ್ನ ಎಂಟು ತಿಂಗಳ ಮಗುವನ್ನು ಬಿಪ್ರಚರಣಪುರ ಗ್ರಾಮದ ಫುಲಾಮಣಿ ಮತ್ತು ಅಖಿಲ ಮರಾಂಡಿ ದಂಪತಿಗೆ 800 ರೂ.ಗೆ ಮಾರಾಟ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾಳೆ, ಬಳಿಕ ಪೊಲೀಸರು ಆ ಪೋಷಕರನ್ನು ಹುಡುಕಿ ಅವರ ಜೊತೆಯಿದ್ದ ಮಗುವನ್ನು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮಗುವಿನ ತಾಯಿ, ಮಗುವಿನ ಮಾರಾಟ ಮಾಡಲು ಸಹಾಯ ಮಾಡಿದ ಮಧ್ಯವರ್ತಿ ಹಾಗೂ ಮಗುವನ್ನು ಪಡೆದುಕೊಂಡ ಪೋಷಕರು ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ಗಾಳಿ ಮಳೆಯ ಆರ್ಭಟ… ಧರೆಗುರುಳಿದ ವಿದ್ಯುತ್ ಕಂಬ, ಮನೆ ಮೇಲೆ ಬಿದ್ದ ಮರ