ಹೊಸದಿಲ್ಲಿ: ಜಾಗತಿಕ ಉಗ್ರ, ಜೈಶ್- ಇ- ಮೊಹಮ್ಮದ್ ನಾಯಕ ಮೌಲಾನಾ ಮಸೂದ್ ಅಜರ್‌ನನ್ನು ಬಂಧಿಸಲು ಪಾಕಿ ಸ್ಥಾನ ಕೋರ್ಟ್ ಆದೇಶ ಕೊಟ್ಟ ಬೆನ್ನಲ್ಲೇ “ಮುಂದಿನ ಬಂಧನ ಆದೇಶ ಸರದಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನದ್ದೇ?’ ಎಂಬ ಪ್ರಶ್ನೆಯೊಂದು ಜೀವತಳೆದಿದೆ.
“ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಕರಾಚಿಯಲ್ಲೇ ಇದ್ದಾನೆ’ ಎನ್ನುವುದಕ್ಕೆ ಭಾರತ ದಾಖಲೆಗಳ ಸಹಿತ, ಹಲವು ಸಾಕ್ಷ್ಯಗಳನ್ನು ಮುಂದಿಟ್ಟಿತ್ತು. ಪಾಕಿಸ್ಥಾನ ಸರಕಾರ ಅದನ್ನು ತಳ್ಳಿಹಾಕುತ್ತಲೇ ಬಂದಿದೆ.
ದಾವೂದ್ ಸೆರೆ ಸುಲಭವೇ?: ದಕ್ಷಿಣ ಏಷ್ಯಾದ ಕ್ರೈಮ್ ಸಿಂಡಿಕೇಟ್‌ನ ದೈತ್ಯ ದಾವೂ ದ್‌ನ ಬಂಧನ ವಿಚಾರ ಇಮ್ರಾನ್ ಸರಕಾರಕ್ಕೆ ಅಕ್ಷರಶಃ ಆ್ಯಸಿಡ್ ಟೆಸ್ಟ್ ಇದ್ದ ಹಾಗೆೆ. ಪಾಕ್ ಸರಕಾರ ಗಳ ಆಯ್ಕೆಯಲ್ಲಿ ಎರಡೂವರೆ ದಶಕಗಳಿಂದ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವ ದಾವೂದ್‌ನನ್ನು ಮುಟ್ಟೋದು ಇಮ್ರಾನ್‌ಗೆ ಸಾಧ್ಯವೇ ಎಂಬ ಪ್ರಶ್ನೆಯೂ ಹೊಗೆಯಾಡುತ್ತಿದೆ.
ಪಾಕ್‌ಗೆ ಬೇರೆ ದಾರಿ ಇಲ್ಲ!: ಅಧಿಕಾರಕ್ಕಾಗಿ, ಆರ್ಥಿಕತೆ ನೆಲಕ್ಕಚ್ಚಿ ರೊಚ್ಚಿಗೆದ್ದಿರುವ ಜನರನ್ನು ಓಲೈಸಿಕೊಳ್ಳುವುದಕ್ಕಾಗಿ ಇಮ್ರಾನ್‌ಗೆ ಉಗ್ರರ ಸೆರೆ ಏಕೈಕ ದಾರಿ. ಪಾಕಿಸ್ಥಾನವನ್ನು ಬೂದು ಪಟ್ಟಿಯಿಂದ ಹೊರತಂದು ಚುನಾವಣೆ ವೇಳೆ ಐಎಂಎಫ್ನಿಂದ ಅನುದಾನ ಪಡೆಯು ವುದು, ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರ ವಿಶ್ವಾಸ ಗಳಿಸುವುದು ಇಮ್ರಾನ್ ಮುಂದಿರುವ ಸದ್ಯದ ಗುರಿಗಳು. ಅಮೆರಿಕ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಕಾರ ದಾವೂದ್ ಕೂಡ ಜಾಗತಿಕ ಉಗ್ರ. ಎಫ್ಎಟಿಎಫ್ “ಬೂದು ಪಟ್ಟಿ’ಯಿಂದ ಪಾಕ್ ಹೊರಬರ ಬೇಕಾದರೆ, ಇಮ್ರಾನ್ ಕಠಿನ ನಿಲುವು ತಾಳಲೇ ಬೇಕಿದೆ ಎನ್ನುವುದು ಪಾಕ್ ವೀಕ್ಷಕರ ವಿಶ್ಲೇಷಣೆ.
ದಾವೂದ್ ಮಗಳು ಪಾಕ್ ಬಿಡ್ತಾಳಾ? :
ದಾವೂದ್ ತನ್ನ ಮಗಳು ಮೆಹರೂಕ್‌ಳನ್ನು ಪಾಕ್‌ನ ಮಾಜಿ ಕ್ರಿಕೆಟಿಗ ಜಾವೇ ದ್ ಮಿಯಾಂದಾದ್‌ನ ಮಗ ಜುನೈದ್‌ಗೆ ಕೊಟ್ಟು ಮದುವೆ ಮಾಡಿದ್ದ. ಇವರಿ ಬ್ಬರಿಗೂ ದಾವೂದ್ ಈಗ ಪೋರ್ಚ್ ಗೀಸ್ ವೀಸಾ ಮಾಡಿಸಿದ್ದಾನೆ ಎಂದು ಭಾರತೀಯ ಗುಪ್ತಚರ ಮೂಲಗಳು ತಿಳಿಸಿವೆ. ಈ ಹಿಂದೆ, ಅಬುಸಲೇಮ್‌ಗೆ ಬಂಧನದ ಭೀತಿ ಎದುರಾಗಿದ್ದಾಗ ದಾವೂದ್ ಇಂಥದ್ದೇ ವೀಸಾ ಮಾಡಿಸಿ, ಪೋರ್ಚ್ ಗೀಸ್‌ಗೆ ಕಳುಹಿಸಿದ್ದ. ಅಬು ಅಲ್ಲಿಯೇ ಅರೆಸ್ಟ್ ಆಗಿದ್ದ. ಪಾಕ್‌ನಲ್ಲಿ ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಮಗಳು- ಅಳಿಯನನ್ನು ಮೊದಲು ರಕ್ಷಿಸುವ ಯೋಜನೆಯನ್ನು ದಾವೂದ್ ರೂಪಿಸಿದ್ದಾನೆ ಎನ್ನಲಾಗುತ್ತಿದೆ.