Advertisement

ಅಮೂಲ್ಯ ವಿರುದ್ಧ ಪ್ರತಿಭಟನೆ; ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಯುವತಿ!

10:02 AM Feb 22, 2020 | Team Udayavani |

ಬೆಂಗಳೂರು: ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮತ್ತೆ ಯುವತಿಯೊಬ್ಬಳು ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಘಟನೆ ಶುಕ್ರವಾರ ಟೌನ್ ಹಾಲ್ ಬಳಿ ನಡೆದಿದೆ.

Advertisement

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಹಿಂದೂಪರ ಸಂಘಟನೆ ಇಂದು ಬೆಳಗ್ಗೆ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದವು. ಈ ಸಂದರ್ಭದಲ್ಲಿ ಯುತಿಯೊಬ್ಬಳು ಏಕಾಏಕಿ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದಳು.

ಕೂಡಲೇ ಕಾರ್ಯಕ್ರಮದಲ್ಲಿದ್ದವರು, ಪೊಲೀಸರು ಯುವತಿಯನ್ನು ಹಿಡಿದು ವಶಕ್ಕೆ ಒಪ್ಪಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬಂಧಿತ ಯುವತಿಯನ್ನು ಗ್ರಾಫಿಕ್ ಡಿಸೈನರ್ ಆರ್ದಾ ಎಂದು ಗುರುತಿಸಲಾಗಿದೆ. ಮಲ್ಲೇಶ್ವರಂನ ಕಾಲೇಜ್ ನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿದ್ದಳು. ಮಲ್ಲೇಶ್ವರಂ ನಿವಾಸಿಯಾಗಿರುವ ಆರ್ದಾ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next