Advertisement

Amarnath Yatra ಬಳಿಕ ಕಾಶ್ಮೀರ ವಿಧಾನಸಭೆ ಚುನಾವಣೆ ಸಾಧ್ಯತೆ

01:19 AM Jul 06, 2024 | Team Udayavani |

ಹೊಸದಿಲ್ಲಿ: ಅಮರನಾಥ ಯಾತ್ರೆ ಮುಗಿದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಯಾತ್ರೆ ಆ.19 ರಂದು ಮುಕ್ತಾಯಗೊಳ್ಳಲಿದೆ. ಸುಪ್ರೀಂ ಕೋರ್ಟ್‌ ಕೂಡ ಸೆಪ್ಟಂಬರ್‌ ಒಳಗೇ ಚುನಾವಣೆ ನಡೆಸುವಂತೆ ಕೇಂದ್ರ‌ಕ್ಕೆ ಸೂಚಿಸಿತ್ತು. 2019ರಲ್ಲಿ ವಿಶೇಷ ಸ್ಥಾನ ಮಾನ ರದ್ದುಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ. ಈ ಮಧ್ಯೆ ಬುಧವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ- ಸಚಿವ ಜೆ.ಪಿ.ನಡ್ಡಾ ಸಭೆ ನಡೆಸಿ, 90 ವಿಧಾನಸಭೆ ಕ್ಷೇತ್ರಗಳಿಗೆ ಬಿಜೆಪಿ ಸ್ಪರ್ಧಿಸಲಿದೆ. ಈ ಕುರಿತು ಸಿದ್ಧತೆ ನಡೆಸುವಂತೆ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.  ಚುನಾವಣೆ ಪೂರ್ವ ಯಾವ ಪಕ್ಷದೊಂದಿಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಹಾಗಿದ್ದೂ, “ಸಮಾನ ಮನಸ್ಕ ಪಕ್ಷ’ಗಳೊಂದಿಗೆ “ಸೀಟು ಹೊಂದಾಣಿಕೆ ಮತ್ತು ಚುನಾವಣ ಒಪ್ಪಂದ ಮಾಡಿಕೊಳ್ಳಬಹುದು ಎಂದು ಬಿಜೆಪಿ ರಾಷ್ಟ್ರೀಯ ನಾಯಕತ್ವ ತಿಳಿಸಿದೆ ಎನ್ನಲಾಗಿದೆ.

Advertisement

ಇದೇ ವೇಳೆ ಶನಿವಾರ ನಡ್ಡಾ ಕಣಿವೆಗೆ ಭೇಟಿ ನೀಡಿ, ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next