ಶಿರಸಿ: ಕಳೆದ ಮೂರು ವರ್ಷದ ಏಳು ತಿಂಗಳುಗಳಿಂದ ಬಿಜೆಪಿ ಪಕ್ಷದ ರಾಜಕೀಯ ಚಟುವಟಿಕೆಯಿಂದ ದೂರ ಇದ್ದ ಸ್ಪೀಕರ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ಮಾತೃ ಪಕ್ಷ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡರು.
ಗುರುವಾರ ಸಂಜೆ ಶಿರಸಿಯ ವಿಕಾಸಾಶ್ರಮ ಬಯಲಿನಲ್ಲಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡ ರೈತ ಸಮಾವೇಶದಲ್ಲಿ ಪಾಲ್ಗೊಂಡ ಕಾಗೇರಿ, ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪಾಲ್ಗೊಳ್ಳಲು ಮರಳಿ ಎಂಟ್ರಿ ನೀಡಿದರು.
ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಲ್ಲಿಂದ ಟ್ರಾಕ್ಟರ್ ಮೂಲಕ ಸಭೆ ನಡೆಯುವ ಬಯಲಿಗೆ ಆಗಮಿಸಿ ಸಭೆಯಲ್ಲಿ ಮಾತನಾಡಿದರು.
ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್ಟ, ಪ್ರಮುಖರಾದ ಗಿರೀಶ ಪಟೇಲ್, ಪ್ರಸನ್ನ ಕೆರೆಕೈ, ನಾಗರಾಜ ತೊರ್ಕೆ, ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ಗಣೇಶ ಸಣ್ಣಲಿಂಗಣ್ಣನವರ್, ಪ್ರಸನ್ನ ಕೆರೇಕೈ, ಸದಾನಂದ ಭಟ್ಟ, ನರಸಿಂಹ ಬಕ್ಕಳ ಇತರರು ಇದ್ದರು.