ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣದಲ್ಲಿ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಇಂಟರ್‌ಪೋಲ್ ಸಹಾಯದಿಂದ ಸಿಬಿಐ ತಂಡ ಅಮೆರಿಕಾದಲ್ಲಿ ಬಂಧಿಸಿ ಸ್ವದೇಶಕ್ಕೆ ಕರೆತರಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಿಬಿಐ, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸುಮಾರು ೨೫ ವರ್ಷಗಳಿಂದ ತಲೆಮರೆಸಿಕೊಂಡು ಅಮೆರಿಕದಲ್ಲಿ ನೆಲೆಸಿದ್ದ ಆರೋಪಿಯನ್ನು ನ್ಯಾಷನಲ್ ಸೆಂಟ್ರಲ್ ಬ್ಯೂರೋ-ವಾಷಿಂಗ್ಟನ್ ಜೊತೆಗೆ ಇಂಟರ್‌ಪೋಲ್ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಆರೋಪಿ ರಾಜೀವ್ ಮೆಹ್ತಾ ಅವರು 1998 ರಲ್ಲಿ ದಾಖಲಾದ ಕ್ರಿಮಿನಲ್ ಮೊಕದ್ದಮೆಯಲ್ಲಿ ವಂಚನೆ, ಕಳ್ಳತನ ಮತ್ತು ಕ್ರಿಮಿನಲ್ ಪಿತೂರಿಯನ್ನು ಒಳಗೊಂಡಿರುವ ಅಪರಾಧ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿದ್ದರು. ಈ ವೇಳೆ ಬಂಧನದಿಂದ ತಪ್ಪಿಸಿಕೊಳ್ಳಲು ಮೆಹ್ತಾ ಅಮೆರಿಕಕ್ಕೆ ಪಲಾಯನಗೊಂಡಿದ್ದರು ಎಂದು ಹೇಳಲಾಗಿದೆ.
ಆರೋಪಿ ಮೆಹ್ತಾನನ್ನು ಪತ್ತೆಹಚ್ಚುವ ಮತ್ತು ಬಂಧಿಸುವ ಉದ್ದೇಶದಿಂದ ಎಲ್ಲಾ ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳಿಗೆ ಜೂನ್ 16, 2000 ರಂದು ಇಂಟರ್‌ಪೋಲ್ ಜನರಲ್ ಸೆಕ್ರೆಟರಿಯೇಟ್‌ನಿಂದ ರಾಜೀವ್ ಮೆಹ್ತಾ ವಿರುದ್ಧ ಸಿಬಿಐನಿಂದ ರೆಡ್ ನೋಟಿಸ್ ಹೊರಡಿಸಲಾಯಿತು. ಕಾರ್ಯಾಚರಣೆ ನಡೆಸಿದ ಇಂಟರ್‌ಪೋಲ್ ತಂಡ 25 ವರ್ಷಗಳ ಬಳಿಕ ಮೆಹ್ತಾ ಅವರನ್ನು ಅಮೆರಿಕದಲ್ಲಿ ಪತ್ತೆ ಹಚ್ಚಿದ್ದು ಇದೀಗ ಭಾರತಕ್ಕೆ ಹಸ್ತಾಂತರ ಮಾಡಿದೆ.
ಇದನ್ನೂ ಓದಿ: NDA ತೊರೆದ 15 ವರ್ಷಗಳ ಬಳಿಕ ಮತ್ತೆ ಮೈತ್ರಿಯ ಸುಳಿವು ನೀಡಿದ ಬಿಜು ಜನತಾ ದಳ