ಮಧುರೈ: ಅಡುಗೆ ಮನೆ, ಜನಸಾಮಾನ್ಯರ ದೈನಿಕ ಬದುಕಿನ ಅವಿಭಾಜ್ಯ ಅಂಗಗಳಲ್ಲಿ ಒಂದಾದ ಬೆಂಕಿಪೊಟ್ಟಣದ ಬೆಲೆ ಡಿಸೆಂಬರ್ ತಿಂಗಳಿನಿಂದ ದುಪ್ಪಟ್ಟಾಗಲಿದೆ.
ಅಂದರೆ, ಈಗಿರುವ ಒಂದು ರೂಪಾಯಿಯಿಂದ ಎರಡು ರೂಪಾಯಿಗಳಿಗೆ ಏರಲಿದೆ. ಕಚ್ಚಾವಸ್ತುಗಳ ಬೆಲೆಯಲ್ಲಿ ಆಗಿರುವ ಏರಿಕೆಯೇ ಇದಕ್ಕೆ ಕಾರಣ.
ವಿಶೇಷವೆಂದರೆ ಬೆಂಕಿಪೊಟ್ಟಣದ ಬೆಲೆಯೇರಿಕೆಯಾಗುತ್ತಿ ರುವುದು ಸುದೀರ್ಘ 14 ವರ್ಷಗಳ ಬಳಿಕ, ಈ ಹಿಂದೆ 2007ರಲ್ಲಿ 50 ಪೈಸೆಗಳಿದ್ದುದನ್ನು 1 ರೂಪಾಯಿಗೆ ಏರಿಸಲಾಗಿತ್ತು.
ಬೆಂಕಿಪೊಟ್ಟಣ ಉದ್ಯಮದ ಐದು ಪ್ರಮುಖ ಸಂಘಟನೆಗಳು ಶಿವಕಾಶಿಯಲ್ಲಿ ಸಭೆ ನಡೆಸಿದ್ದು, ಗರಿಷ್ಠ ಮಾರಾಟ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿವೆ.
ಇದನ್ನೂ ಓದಿ:ಭೀಮಾ ಕೋರೆಗಾಂವ್ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್ ಸಿಂಗ್‌ಗೆ ಸಮನ್ಸ್ ಜಾರಿ