Advertisement
ಈ ಶಾಲೆಗಳಿಗೆ 700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ರಾಜ್ಯ ಬೆಂಬಲಿತ ಸಲ್ವಾ ಜುದಮ್ ಮಿಲಿಷಿಯಾ ಮತ್ತು ಮಾವೋದಿಗಳ ನಡುವಿನ ಹಿಂಸಾಚಾರ ತೀವ್ರ ರೂಪ ಪಡೆದುಕೊಂಡಿದ್ದರ ಪರಿಣಾಮ ಬಸ್ತಾರ್ ಪ್ರದೇಶದಲ್ಲಿ ಸರಕಾರ ಆಡಳಿತವನ್ನು ಸ್ಥಗಿತಗೊಳಿಸುವುದರೊಂದಿಗೆ 2011 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 300 ಶಾಲೆಗಳನ್ನು ಮುಚ್ಚಿತ್ತು.
ಅತ್ಯಂತ ಸೂಕ್ಷ್ಮಮತ್ತು ದೂರದ ಹಳ್ಳಿಗಳ ಮಕ್ಕಳನ್ನು ಶಿಕ್ಷಣ ಮೂಲಕ ಮುಖ್ಯವಾಹಿಗೆ ತರಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಗ್ರಾಮಸ್ಥರ ಬೆಂಬಲದೊಂದಿಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಬಿಜಾಪುರ ಜಿಲ್ಲಾಧಿಕಾರಿ ಕೆ ಡಿ ಕುಂಜಮ್ ಹೇಳಿದ್ದಾರೆ.
Related Articles
ಈ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸ್ಲೇಟ್‌ಗಳು, ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳನ್ನು ಒದಗಿಸಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟವನ್ನೂ ನೀಡಲಾಗುತ್ತಿದೆ.
Advertisement
ಶಿಕ್ಷಾ ಡೂಟ್ಸ್ಜಿಲ್ಲಾಡಳಿತವು ಸ್ಥಳೀಯ ನಿರುದ್ಯೋಗಿ ನಿವಾಸಿಗಳನ್ನು ಶಿಕ್ಷಾ ಡೂಟ್ಸ್ (ಶಿಕ್ಷಕರು) ಎಂದು ನೇಮಕ ಮಾಡಿದ್ದು, ಅವರಿಗೆ ಜಿಲ್ಲಾ ಖನಿಜ ನಿಧಿಯಿಂದ ಮಾಸಿಕ ಗೌರವ ಮೊತ್ತವನ್ನು ನೀಡಲಾಗುತ್ತಿದೆ. ಈ ಪ್ರದೇಶದ ಗಣಿಗಾರಿಕೆ ಕಂಪನಿಗಳು ಅದರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ. ಹಿಂಸಾಚಾರ ಇಳಿಮುಖ
ದಕ್ಷಿಣ ಏಷ್ಯಾ ಭಯೋತ್ಪಾದನಾ ಪೋರ್ಟಲ್ ಅಂಕಿ ಅಂಶಗಳ ಪ್ರಕಾರ, 2007 ರಲ್ಲಿ 51 ಹಿಂಸಾಚಾರ ಘಟನೆಗಳಲ್ಲಿ 98 ಭದ್ರತಾ ಪಡೆಗಳ ಸಿಬಂದಿ ಸೇರಿದಂತೆ 155 ಜನರು ಸಾವನ್ನಪ್ಪಿದ್ದು, ಬಿಜಾಪುರದಲ್ಲಿ ಹಿಂಸಾಚಾರ ಉತ್ತುಂಗಕ್ಕೇರಿತ್ತು. ತದನಂತರದಲ್ಲಿ ಈ ವರ್ಷ ಸಾವುನೋವುಗಳು ಸಂಖ್ಯೆ ಇಳಿಮುಖವಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ.