Advertisement

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

01:29 AM Apr 26, 2024 | Team Udayavani |

ತಿರುವನಂತಪುರ: ಯೆಮನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ಮಹಿಳೆ ನಿಮಿಷ ಪ್ರಿಯಾರನ್ನು 11 ವರ್ಷಗಳ ಬಳಿಕ ಭೇಟಿಯಾಗುವ ಅವಕಾಶ ಅವರ ತಾಯಿ ಪ್ರೇಮ ಕುಮಾರಿ ಅವರಿಗೆ ದೊರೆತಿದೆ.

Advertisement

ದೂರದ ರಾಷ್ಟ್ರದ ಜೈಲಿನಲ್ಲೇ ನಡೆದ ಈ ತಾಯಿ-ಮಗಳ ಪುನರ್‌ಮಿಲನ ಎಲ್ಲರನ್ನೂ ಭಾವುಕರನ್ನಾಗಿಸಿದೆ. 2017ರಲ್ಲಿ ತಲಾಲ್‌ ಅಬ್ದೋ ಮಹ್ದಿ ಎಂಬ ಯೆಮನಿ ಪ್ರಜೆಯನ್ನು ಕೊಂದಿದ್ದಕ್ಕಾಗಿ ಪ್ರಿಯಾರನ್ನು ನ್ಯಾಯಾಲಯ ಗಲ್ಲು ಶಿಕ್ಷೆಗೆ ಗುರಿಪಡಿಸಿದೆ. ಆಕೆಯ ತಾಯಿ ಪ್ರೇಮ ಅವರು ಮಗಳನ್ನು ನೋಡದೆ 11 ವರ್ಷಗಳೇ ಕಳೆದುಹೋಗಿದ್ದವು. ಇದೀಗ ಸೇವ್‌ ಪ್ರಿಯಾ ಅಂತಾರಾಷ್ಟ್ರೀಯ ಮಂಡಳಿ ವತಿಯಿಂದ ಪ್ರೇಮಾ ಯೆಮನ್‌ ಜೈಲಿಗೆ ತೆರಳಿ ಮಗಳನ್ನು ಭೇಟಿ ಯಾಗಿದ್ದಾರೆ. “ಮಗಳು ಓಡಿ ಬಂದು ನನ್ನನ್ನು ಅಪ್ಪಿ ಕಣ್ಣೀರಾದಳು’ ಎಂದು ಪ್ರೇಮಾ ಭಾವುಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next