Advertisement

ಭಾರತದ ಧ್ವಜದೊಂದಿಗೆ ಅಫ್ರಿದಿ ಫೋಟೋ: ಅಭಿಮಾನಿಗಳ ಸಂಭ್ರಮ

06:25 AM Feb 12, 2018 | Team Udayavani |

ಸೇಂಟ್‌ಮಾರಿಜ್‌ (ಸ್ವಿಜರೆಲಂಡ್‌): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮೇಲಿನ ಪ್ರೀತಿಯಿಂದ ಇತ್ತೀಚೆಗೆ ಸುದ್ದಿಯಾಗುತ್ತಿರುವ ಪಾಕ್‌ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಈಗ ಇನ್ನೊಂದು ವಿಶೇಷ ಕಾರಣಕ್ಕೆ ಸದ್ದು ಮಾಡಿದ್ದಾರೆ. 

Advertisement

ಸದ್ಯ ಸ್ವಿಜರೆಲಂಡ್‌ನ‌ ಸೇಂಟ್‌ ಮಾರಿಜ್‌ನಲ್ಲಿ ಐಸ್‌ ಕ್ರಿಕೆಟ್‌ ನಡೆಯುತ್ತಿದೆ. ಅದರಲ್ಲಿ ಭಾರತ ಕ್ರಿಕೆಟ್‌ ದಿಗ್ಗಜ ವೀರೇಂದ್ರ ಸೆಹ್ವಾಗ್‌, ಪಾಕ್‌ನ ಶಾಹಿದ್‌ ಅಫ್ರಿದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಈ ವೇಳೆ ದಿಗ್ಗಜರನ್ನು ನೋಡಲೆಂದು ಬಂದಿದ್ದ ಭಾರತೀಯ ಅಭಿಮಾನಿಗಳು ಅಫ್ರಿದಿಯೊಂದಿಗೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಭಾರತದ ಧ್ವಜ ಮುದುಡಿಕೊಂಡಿದ್ದನ್ನು ನೋಡಿದ ಅಫ್ರಿದಿ ಅದನ್ನು ಬಿಡಿಸಿ ಸರಿಯಾಗಿ ಹಿಡಿದುಕೊಳ್ಳಲು ಹೇಳಿ ಚಿತ್ರ ತೆಗೆಸಿಕೊಂಡಿದ್ದಾರೆ. ಇದು ಭಾರತ ಮತ್ತು ಪಾಕಿಸ್ತಾನದಲ್ಲೆಲ್ಲ ದೊಡ್ಡ ಸುದ್ದಿಯಾಗಿದೆ. ಎರಡೂ ದೇಶಗಳ ನಡುವೆ ದ್ವೇಷವಿದ್ದರೂ ಜನರ ನಡುವೆ ಪ್ರೀತಿಯೇ ಇದೆ ಎನ್ನುವುದರ ಸಂಕೇತವಾಗಿ ಇದು ಹೆಸರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next