Advertisement

ಆಫ್ರಿಕಾ ಹಂದಿಜ್ವರದ ಭಯ: ಕೇರಳದಲ್ಲಿ ಹಂದಿಗಳ ಹತ್ಯೆ

10:30 PM Jul 24, 2022 | Team Udayavani |

ತಿರುವನಂತಪುರ: ಕೇರಳದ ವಯನಾಡ್‌ ಜಿಲ್ಲೆಯ ಎರಡು ಹಂದಿ ಫಾರ್ಮ್ ಗಳಲ್ಲಿ ಆಫ್ರಿಕಾ ಹಂದಿ ಜ್ವರ ದೃಢವಾದ ಬೆನ್ನಲ್ಲೇ ಕೇರಳದ ಸರ್ಕಾರ ಎರಡೂ ಫಾರ್ಮ್ ಗಳ ಹಂದಿಗಳನ್ನು ಹತ್ಯೆ ಮಾಡುವುದಕ್ಕೆ ಆರಂಭಿಸಿದೆ.

Advertisement

ಎರಡು ಫಾರ್ಮ್ಗಳ ಪೈಕಿ ಒಂದು ಫಾರ್ಮ್ನ ಮಾಲೀಕರಿಗೂ ಸೋಂಕು ತಗುಲಿದೆ. ಇನ್ನೊಂದು ಫಾರ್ಮ್ ನ ಮಾಲೀಕ ಹಂದಿಗಳ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದರೂ, ಸರ್ಕಾರ ಹಂದಿಗಳನ್ನು ಹತ್ಯೆ ಮಾಡಲಾರಂಭಿಸಿದೆ. ಇನ್ನೊಂದು ವಾರದಲ್ಲಿ 360 ಹಂದಿಗಳನ್ನು ಹತ್ಯೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗೆಯೇ ಅದಕ್ಕೆ ಸೂಕ್ತ ಪರಿಹಾರವನ್ನೂ ಮಾಲೀಕರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಸರ್ಕಾರದ ಈ ನಡೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಮಾಲೀಕರೊಬ್ಬರು “ನಮ್ಮ ಫಾರ್ಮ್ ನ ಹಂದಿಗಳಿಗೆ ಹಂದಿ ಜ್ವರವಿದೆಯೆಂದು ವರದಿ ಬಂದಿದೆ. ಆದರೆ ಹಂದಿ ಗಳು ಆರೋಗ್ಯವಾಗಿಯೇ ಇವೆ. ಸರ್ಕಾರ ಇನ್ನೂ ಕೆಲ ಸಮಯ ಕಾದು ನಿರ್ಧಾರ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next