Advertisement

ಆಫ್ರಿಕಾ ದಂಡಕಾರಣ್ಯವೂ ಭಸ್ಮ

01:09 AM Aug 28, 2019 | mahesh |

ವಾಷಿಂಗ್ಟನ್‌: ವಿಶ್ವದ ಅತಿ ಮಹತ್ವದ ಕಾಡುಗಳಲ್ಲೊಂದಾದ ಅಮೆಜಾನ್‌, ಕಾಡ್ಗಿಚ್ಚಿನಿಂದ ಭಸ್ಮವಾಗುತ್ತಿರುವುದರ ಜತೆಯಲ್ಲೇ ಜಗತ್ತಿನ ಎರಡನೇ ಅತಿ ದೊಡ್ಡ ಜೀವವೈವಿಧ್ಯದ ದಂಡಕಾರಣ್ಯ ಎಂದೇ ಪ್ರಸಿದ್ಧವಾದ ಆಫ್ರಿಕಾ ಖಂಡದ ಮಧ್ಯಭಾಗದ ಅರಣ್ಯಗಳೂ ಹೊತ್ತಿ ಉರಿಯುತ್ತಿವೆ ಎಂದು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ತಿಳಿಸಿದೆ.

Advertisement

ತನ್ನ ಮಾಹಿತಿಗೆ ಪೂರಕವಾಗಿ ಉಪಗ್ರಹ ಆಧಾರಿತ ಚಿತ್ರಗಳನ್ನು ಬಿಡುಗಡೆ ಮಾಡಿರುವ ನಾಸಾ, ಆಫ್ರಿಕಾ ಖಂಡದ ಮಧ್ಯದಲ್ಲಿರುವ ಕಾಂಗೋ ಗಣರಾಜ್ಯದಿಂದ ಹಿಡಿದು, ಪೂರ್ವ ಭಾಗದ ಅಂಗೋಲ, ಗಬನ್‌ ರಾಷ್ಟ್ರಗಳು ಹಾಗೂ ದಕ್ಷಿಣ ಆಫ್ರಿಕಾದ ಈಶಾನ್ಯ ಭಾಗದಲ್ಲಿನ ಕಾಡುಗಳಲ್ಲಿ ಬೆಂಕಿ ಅಗಾಧವಾಗಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next