Advertisement

Malappuram; ಆಫ್ರಿಕಾ ಫುಟ್ಬಾಲ್ ಆಟಗಾರನನ್ನು ಅಟ್ಟಾಡಿಸಿದ ಜನತೆ! ಆಗಿದ್ದೇನು?

11:31 AM Mar 14, 2024 | Team Udayavani |

ಕೊಚ್ಚಿ: ಆಫ್ರಿಕಾದ ಫುಟ್ ಬಾಲ್ ಆಟಗಾರನೊಬ್ಬನನ್ನು ಬೆನ್ನಟ್ಟಿದ ಜನಸಮೂಹವು ಆತನಿಗೆ ಥಳಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

Advertisement

ಐವರಿ ಕೋಸ್ಟ್ ದೇಶದ ದೈರ್ರಾಸೌಬಾ ಹಾಸನ್ ಜೂನಿಯರ್ ಹಲ್ಲೆಗೊಳಗಾದ ವ್ಯಕ್ತಿ.

ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜವಾಹರ್ ಮಾವೂರ್ ಎಂಬ ಫುಟ್ಬಾಲ್ ಕ್ಲಬ್ ಅನ್ನು ಹಾಸನ್ ಜೂನಿಯರ್ ಪ್ರತಿನಿಧಿಸುತ್ತಿದ್ದಾರೆ. ಸೆವೆನ್ಸ್ ಫುಟ್ಬಾಲ್ ಮಲಪ್ಪುರಂನಲ್ಲಿ ಪ್ರಸಿದ್ಧ ಕ್ರೀಡಾಕೂಟವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ, ನೀಲಿ ಟೀ ಶರ್ಟ್ ಧರಿಸಿದ್ದ ದೈರ್ರಾಸೌಬಾ ಹಾಸನ್ ಜೂನಿಯರ್ ನನ್ನು ಅರೀಕೋಡ್‌ ನ ಮೈದಾನದಲ್ಲಿ ಜನರ ಗುಂಪು ಅಟ್ಟಾಡಿಸಿಕೊಂಡು ಹೋಗುವುದು ಕಂಡು ಬಂದಿದೆ.

ಐವರಿ ಕೋಸ್ಟ್ ಫುಟ್ಬಾಲ್ ಆಟಗಾರನನ್ನು ಜನರು ಹಿಡಿದು ಪದೇ ಪದೇ ಥಳಿಸುತ್ತಾರೆ. ಕೆಲವು ಪ್ರೇಕ್ಷಕರು ಫುಟ್ಬಾಲ್ ಆಟಗಾರ ತಮ್ಮಲ್ಲಿ ಒಬ್ಬನನ್ನು ಒದ್ದರು ಎಂದು ಆರೋಪಿಸಿದರು, ಇದು ಘಟನೆಗೆ ಕಾರಣವಾಯಿತು.

Advertisement

ಬಿಳಿ ಟೀ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಆಫ್ರಿಕನ್ ವ್ಯಕ್ತಿಯನ್ನು ಹೊಡೆತಗಳಿಂದ ರಕ್ಷಿಸುತ್ತಿರುವುದನ್ನು ಕಾಣಬಹುದು. ಬಿಳಿ ಟಿ-ಶರ್ಟ್‌ನಲ್ಲಿರುವ ವ್ಯಕ್ತಿ ಕೋಪಗೊಂಡ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ನಂತರ, ಫುಟ್‌ಬಾಲ್ ಆಟಗಾರನು ಗೇಟ್‌ ನಿಂದ ಹೊರಡುತ್ತಿರುವುದನ್ನು ಕಾಣಬಹುದು.

ಹಾಸನ್ ಜೂನಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಫುಟ್ಬಾಲ್ ಆಟಗಾರನು ತನ್ನ ತಂಡಕ್ಕೆ ಕಾರ್ನರ್ ಕಿಕ್ ಸಿಕ್ಕಿತು ಮತ್ತು ಅವನು ತನ್ನ ಸ್ಥಾನವನ್ನು ಪಡೆದುಕೊಳ್ಳಲು ಮುಂದಾದಾಗ, ಪ್ರೇಕ್ಷಕರು ತನ್ನನ್ನು ಜನಾಂಗೀಯ ನಿಂದನೆ ಮಾಡಿದರು. ಗುಂಪು ತನ್ನ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದೂ ಆರೋಪಿಸಿದ್ದಾರೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next