ಅಫಜಲಪುರ: ಒಮ್ಮೆಲೆ ಧಾರಾಕಾರ ವಾಗಿ ಸತತ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳಿಗೆ ಹಾನಿಯಾಗಿದ್ದು, ಅಲ್ಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಆನೂರ, ಬಿಲ್ವಾಡ, ಬಡದಾಳ, ಮಲ್ಲಾಬಾದ, ಸಿದ್ಧನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಳ್ಳದ ಸೇತುವೆಗಳು ಮುಳುಗಡೆಯಾಗಿದ್ದು, ಈ ಭಾಗದ ಮನೆಗಳಲ್ಲೂ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತೆ ಆಗಿತ್ತು.
ಮಳೆ ಮಾಹಿತಿ: ಮಂಗಳವಾರ ರಾತ್ರಿ ಸುರಿದ ಮಳೆ ಸುಮಾರು 161ಮಿ.ಮೀ ಮಳೆ ಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ, ಬೆಳೆ ಹಾಳಾಗಿದೆ. ಈ ಪೈಕಿ ಅಫಜಲಪುರ ವಲಯದಲ್ಲಿ 59.2ಮಿ. ಮೀ, ಗೊಬ್ಬೂರ(ಬಿ) ವಲಯದಲ್ಲಿ 17.2ಮಿ.ಮೀ, ಅತನೂರ ವಲಯದಲ್ಲಿ 30.2ಮಿ.ಮೀ ಹಾಗೂ ಕರ್ಜಗಿ ವಲಯದಲ್ಲಿ 55ಮಿ.ಮೀ ಮಳೆ ದಾಖಲಾಗಿದೆ ಎಂದು ಕೃಷಿ ಇಲಾಖೆ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರ್ಯಾಕ್ಟರ್ನಲ್ಲಿ ವಿದ್ಯಾರ್ಥಿಗಳ ಸಾಗಾಟ: ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ತಾಲೂಕಿನ ಆನೂರದಿಂದ ಬಿಲ್ವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಬಿಲ್ವಾಡ ಗ್ರಾಮದಿಂದ ಆನೂರ ಗ್ರಾಮಕ್ಕೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯವಿಲ್ಲದೆ ಇದ್ದುದರಿಂದ ನಡೆದುಕೊಂಡು ಹೋಗಿದ್ದರು. ಆದರೆ ಆದರೆ ಮರಳಿ ಊರಿಗೆ ಹೋಗುವಾಗ ಹಳ್ಳ ತುಂಬಿ ಹರಿಯುತ್ತಿತ್ತು. ಆಗ ಆನೂರ ಗ್ರಾಮದ ಟ್ರಾÂಕ್ಟರ್ ಚಾಲಕ ಭಾಗಣ್ಣಗೌಡ ಬಳೂಂಡಗಿ ತಮ್ಮ ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಬಿಲ್ವಾಡ ಗ್ರಾಮಸ್ಥರನ್ನು ಕರೆದುಕೊಂಡು ಹೋದರು.