Advertisement
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಲ್ಲಿನ ಕ್ರಿಕೆಟ್ ಕೂಡ ಸಾಕಷ್ಟು ನಲುಗಿರುವುದು ರಹಸ್ಯವೇನಲ್ಲ. ಜತೆಗೆ ವಿಶ್ವಕಪ್ ತಂಡ ಆಯ್ಕೆಗೊಂಡ ಬಳಿಕ ಸಾಕಷ್ಟು ಅನಿರೀಕ್ಷಿತ ವಿದ್ಯಮಾನಗಳು ಘಟಿಸಿದವು. ರಶೀದ್ ಖಾನ್ ನಾಯಕತ್ವದಿಂದ ಕೆಳಗಿಳಿದರು. ಈ ಸ್ಥಾನಕ್ಕೆ ಹಿರಿಯ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರನ್ನು ಮರಳಿ ನೇಮಿಸಲಾಯಿತು.
Related Articles
Advertisement
“ನಮ್ಮನ್ನು ಲಘುವಾಗಿ ಪರಿಗಣಿಸದಿರಿ’ಇನ್ನೊಂದೆಡೆ ಸ್ಕಾಟ್ಲೆಂಡ್ ಅರ್ಹತಾ ಸುತ್ತಿನ ಮೂರೂ ಪಂದ್ಯಗಳನ್ನು ಗೆದ್ದ ಸಂಭ್ರಮದಲ್ಲಿದೆ. ಮೊದಲ ಜಯವೇ ನಂ.6 ಬಾಂಗ್ಲಾದೇಶ ವಿರುದ್ಧ ಬಂದಿರುವುದು ಕೈಲ್ ಕೋಟ್ಜರ್ ಬಳಗದ ಆತ್ಮವಿಶ್ವಾಸವನ್ನು ಬಹಳಷ್ಟು ಹೆಚ್ಚಿಸಿದೆ. ಸ್ಕಾಟ್ಲೆಂಡ್ ಈ ಕೂಟದಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಆದರೆ ಕೆಲವು ಏರುಪೇರಿನ ಫಲಿತಾಂಶ ದಾಖಲಿಸಿ ಗ್ರೂಪ್ ವಿಭಾಗದ ಲೆಕ್ಕಾಚಾರವನ್ನು ತಲೆ ಕೆಳಗು ಮಾಡುವುದನ್ನು ಅಲ್ಲಗಳೆಯುವಂತಿಲ್ಲ. “ನಮ್ಮನ್ನು ಯಾರೂ ಲಘುವಾಗಿ ಪರಿಗಣಿಸುವುದು ಬೇಡ. ನಾವೀಗ ಅತ್ಯುತ್ತಮ ಫಾರ್ಮ್ ನಲ್ಲಿದ್ದೇವೆ. ಹಿಂದೆಯೂ ನಾವು ಸಾಕಷ್ಟು ಏರುಪೇರಿನ ಫಲಿತಾಂಶ ದಾಖಲಿಸಿದ್ದೇವೆ. ಇಂಗ್ಲೆಂಡನ್ನೂ ಮಣಿಸಿದ ದಾಖಲೆ ಇದೆ. ಎದುರಾಳಿಗಳು ಭೀತಿಪಡುವ ರೀತಿಯಲ್ಲಿ ನಮ್ಮ ಪ್ರದರ್ಶನ ಸಾಗಲಿದೆ’ ಎಂದಿದ್ದಾರೆ ನಾಯಕ ಕೋಟ್ಜರ್.