Advertisement
ಅಫ್ಘಾನ್ ನೀಡಿದ 252 ರನ್ನುಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ಭಾರತವು ಇನ್ನೂ 1 ಎಸೆತ ಬಾಕಿಯಿದ್ದಂತೆ 252 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಜಯದ ಹೊಸ್ತಿಲಲ್ಲಿ ಎಡವಿತು. ರವೀಂದ್ರ ಜಡೇಜಾ (25) ಅವರು ಅಂತಿಮ ವಿಕೆಟ್ ರೂಪದಲ್ಲಿ ಔಟಾಗುತ್ತಿದ್ದಂತೆಯೇ ಅಫ್ಘಾನ್ ಆಟಗಾರರು ಮೈದಾನದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತಕ್ಕೆ ಹಾಗೂ ಕೂಟದಿಂದ ಹೊರಬಿದ್ದಿದ್ದ ಅಫ್ಘಾನಿಸ್ಥಾನಕ್ಕೆ ಈ ಪಂದ್ಯ ಯಾವುದೇ ರೀತಿಯಲ್ಲಿ ಮಹತ್ವದಲ್ಲವಾಗಿದ್ದರೂ ಕ್ರಿಕೆಟ್ ಶಿಶು ಅಫ್ಘಾನಿಸ್ಥಾನಕ್ಕೆ ಈ ಚೇತೋಹಾರಿ ಪ್ರದರ್ಶನ ಅದ್ಭುತವಾದ ನೈತಿಕ ಬಲವನ್ನು ತುಂಬಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.ಅಫ್ಘಾನ್ ವಿಕೆಟ್ ಕೀಪರ್ ಮುಹಮ್ಮದ್ ಶಹಝಾದ್ (124) ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 8 ವಿಕೆಟ್ ನಷ್ಟದಲ್ಲಿ 252 ರನ್ನುಗಳನ್ನು ಕಲೆಹಾಕಿದ ಅಫ್ಘಾನ್ ಎದುರಾಳಿಯ ಗೆಲುವಿಗೆ 253 ರನ್ನುಗಳ ಗುರಿಯನ್ನು ನಿಗದಿಪಡಿಸಿತು.
Related Articles
Advertisement
ಕಳೆದ ಪಂದ್ಯದ ಹೀರೋಗಳಾಗಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸೇರಿದಂತೆ ಬುಮ್ರಾ, ಭುವನೇಶ್ವರ್ ಮತ್ತು ಚಾಹಲ್ ಅವರಿಲ್ಲದಿದ್ದ ಟೀಂ ಇಂಡಿಯಾವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದರು. ಇದು ಕೂಲ್ ಕ್ಯಾಪ್ಟನ್ ಧೋನಿ ಅವರ ನಾಯಕತ್ವದ 200ನೇ ಏಕದಿನ ಪಂದ್ಯವಾಗಿತ್ತು.