Advertisement

Afghanistan: ನೂರ್‌ ಅಲಿ ಜದ್ರಾನ್‌ ವಿದಾಯ

12:35 AM Mar 09, 2024 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದ ಹಿರಿಯ ಬ್ಯಾಟರ್‌ ನೂರ್‌ ಅಲಿ ಜದ್ರಾನ್‌ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.

Advertisement

ನೂರ್‌ ಅಲಿ ಜದ್ರಾನ್‌ 2009ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದು 28 ಎಸೆತಗಳಿಂದ 45 ರನ್‌ ಬಾರಿಸಿ ಅಬ್ಬರಿಸಿದ್ದರು. ಕಳೆದ ವಾರ ಐರ್ಲೆಂಡ್‌ ವಿರುದ್ಧ ಅಂತಿಮ ಟೆಸ್ಟ್‌ ಆಡಿದರು.

35 ವರ್ಷದ ಜದ್ರಾನ್‌ ಅಫ್ಘಾನ್‌ ಪರ 2 ಟೆಸ್ಟ್‌, 51 ಏಕದಿನ ಹಾಗೂ 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಗಳಿಸಿದ ಒಟ್ಟು ರನ್‌ 1,930. ಇದರಲ್ಲಿ ಒಂದು ಶತಕ ಹಾಗೂ 11 ಅರ್ಧ ಶತಕ ಸೇರಿದೆ. ನೂರ್‌ ಅಲಿ ಜದ್ರಾನ್‌ ಶ್ರೀಲಂಕಾ ವಿರುದ್ಧ ಈ ವರ್ಷದ ಆರಂಭದಲ್ಲಷ್ಟೇ ಟೆಸ್ಟ್‌ ಪದಾರ್ಪಣೆ ಮಾಡಿದ್ದರು. ಸೋದರ ಸಂಬಂಧಿ ಇಬ್ರಾಹಿಂ ಜದ್ರಾನ್‌ ಅವರಿಂದ ಟೆಸ್ಟ್‌ಕ್ಯಾಪ್‌ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next