Advertisement

ಲಾರ್ಡ್ಸ್‌ನಲ್ಲಿ ಏಕದಿನ ಪಂದ್ಯವಾಡಲು ಸಜ್ಜಾಗಿರುವ ಆಫ್ಘಾನ್ನರು

03:45 AM Jul 07, 2017 | Team Udayavani |

ಕಾಬೂಲ್‌: ಟೆಸ್ಟ್‌ ಕ್ರಿಕೆಟ್‌ ಮಾನ್ಯತೆ ಪಡೆಯುವ ಆಸೆಯಲ್ಲಿರುವ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡ ತನ್ನ ಇತಿಹಾಸದಲ್ಲೇ ಮೈಲುಗಲ್ಲೆನಿಸುವ ಪಂದ್ಯವೊಂದಕ್ಕೆ ಸಿದ್ಧವಾಗುತ್ತದೆ. ಜು.11ಕ್ಕೆ ಅದು ಮೊದಲ ಬಾರಿಗೆ ಕ್ರಿಕೆಟ್‌ನ ಮೂಲಸ್ಥಾನ ಎಂದು ಕರೆಸಿಕೊಳ್ಳಲ್ಪಡುವ ಲಾರ್ಡ್ಸ್‌ನಲ್ಲಿ ಆಡಲಿದೆ.

Advertisement

ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡನ್‌ ಮೆಕಲಂ ನೇತೃತ್ವದ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ ತಂಡವನ್ನು ಆಫ್ಘಾನ್ನ ಎದುರಿಸಲಿದ್ದಾರೆ. ಈ ಏಕದಿನ ಪಂದ್ಯವು ಕ್ರಿಕೆಟ್‌ ಶಿಶುಗಳಾದ ಆಫ‌^ನ್ನರ ಪಾಲಿಗೆ ಐತಿಹಾಸಿಕವೆಂದು ಬಣ್ಣಿಸಲಾಗಿದೆ. ಒಂದು ವೇಳೆ ಅದು ಈ ಪಂದ್ಯದಲ್ಲಿ ಯಶಸ್ವಿಯಾದರೆ ಟೆಸ್ಟ್‌ ಮಾನ್ಯತೆ ಪಡೆದುಕೊಳ್ಳುವುದಕ್ಕೆ ಇನ್ನಷ್ಟು ಹತ್ತಿರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next