Advertisement

ಅಫ್ಘಾನ್‌ ಸಂಸದೀಯ ಚುನಾವಣೆ: ಮತದಾನ ಆರಂಭ, 88 ಲಕ್ಷ ಮತದಾರರು

12:12 PM Oct 20, 2018 | udayavani editorial |

ಕಾಬೂಲ್‌ : ಅಫ್ಘಾನಿಸ್ಥಾನದಲ್ಲಿಂದು ಹತ್ತಾರು ಸಾವಿರ ಜನರು ಸಂಸದೀಯ ಚುನಾವಣೆಗೆ ಮತದಾನಕ್ಕೆ ಧೈರ್ಯದಿಂದ ಮುಂದೆ ಬಂದಿದ್ದು ದೇಶದಲ್ಲಿ ಈಚೆಗೆ ನಿರಂತರವಾಗಿ ನಡೆಯುತ್ತಿರುವ ಚುನಾವಣಾ ಹಿಂಸೆಗೆ ತಾವು ಭಯ ಪಡುವವರಲ್ಲ ಎಂದು ಸಾರಿದ್ದಾರೆ. 

Advertisement

ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ ಅವರು ಮತದಾನದ ಆರಂಭದ ಹೊತ್ತಿನಲ್ಲೇ ತಮ್ಮ ಮತ ಚಲಾಯಿಸಿ ಅಫ್ಘಾನಿಸ್ಥಾನದ ಜನರನ್ನು ಇನ್ನೊಂದು ದೊಡ್ಡ ಚುನಾವಣೆಗಾಗಿ ಅಭಿನಂದಿಸಿದರು. 

ಇದೇ ವೇಳೆ ಅವರು ಚುನಾವಣಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಕಟಿಬದ್ಧರಾಗಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರನ್ನು ಕರ್ತವ್ಯಪರತೆಗಾಗಿ  ಅಭಿನಂದಿಸಿದರು. 

ಅಫ್ಘಾನಿಸ್ಥಾನದ ಸ್ವಾಯತ್ತ ಚುನಾವಣಾ ಆಯೋಗ ಸಂಸದೀಯ ಚುನಾವಣೆಗೆ 88 ಲಕ್ಷ ಮತದಾರರನ್ನು ನೋಂದಾಯಿಸಿಕೊಂಡಿದೆ. ದೇಶದ ಮತದಾರರ ನಿಜಕ್ಕೂ ಧೀರರಾಗಿದ್ದಾರೆ ಎಂದು ನಿರ್ಭಿಡೆಯಿಂದ ಮತದಾನಕ್ಕೆ ಬಂದಿರುವ ಸುಮಾರು 50 ಲಕ್ಷ ಮತದಾರರನ್ನು  ಆಯೋಗದ ಓರ್ವ ಸದಸ್ಯರಾಗಿರುವ ವಸೀಮಾ ಬಾದ್‌ ಸಿ ಅಭಿನಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next